ಬೆಳ್ತಂಗಡಿ:ಬಂಟ್ವಾಳದಲ್ಲಿ ಕೊರೊನಾ ಸೋಂಕಿನಿಂದ ಮಹಿಳೆ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕಿನ ಪುದುವೆಟ್ಟು ಗ್ರಾಮದ ಸಾಮೇದಕಲಪುವಿನ ಒಂದೇ ಕುಟುಂಬದ ಮಕ್ಕಳು ಸೇರಿದಂತೆ 9 ಮಂದಿಯನ್ನು ವೈದ್ಯರ ತಂಡ ಹೋಮ್ ಕ್ವಾರಂಟೈನ್‍ಗೆ ಒಳಪಡಿಸಿದೆ.
ಕೊರೊನಾ ಭೀತಿ: ಬೆಳ್ತಂಗಡಿಯ ಒಂದೇ ಕುಟುಂಬದ 9 ಮಂದಿಗೆ ಹೋಮ್ ಕ್ವಾರಂಟೈನ್ - Home Quarantine
ಕೊರೊನಾ ಸೋಂಕಿನಿಂದ ಮೃತಪಟ್ಟ ಮಹಿಳೆ ಬಂಟ್ವಾಳದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಅವರ ಆರೈಕೆ ಮಾಡಿದ್ದ ನರ್ಸ್ವೊಬ್ಬರ ಗಂಡನ ಮನೆ ಪುದುವೆಟ್ಟಿನ ಸಾಮೇದಕಲಪುವಿನಲ್ಲಿದ್ದು, ಅವರು ಗಂಡನ ಮನೆಗೆ ಬಂದು ಹೋಗಿದ್ದರು. ಹಾಗಾಗಿ ಆ ಕುಟುಂಬದ 9 ಜನರನ್ನು ಹೋಮ್ ಕ್ವಾರಂಟೈನ್ನಲ್ಲಿ ಇಡಲಾಗಿದೆ.
ಹೋಮ್ ಕ್ವಾರಂಟೈನ್
ಕೊರೊನಾ ಸೋಂಕಿನಿಂದ ಮೃತಪಟ್ಟ ಮಹಿಳೆ ಬಂಟ್ವಾಳದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಅವರ ಆರೈಕೆ ಮಾಡಿದ್ದ ನರ್ಸ್ವೊಬ್ಬರ ಗಂಡನ ಮನೆ ಪುದುವೆಟ್ಟಿನ ಸಾಮೇದಕಲಪುವಿನಲ್ಲಿದ್ದು, ಅವರು ಗಂಡನ ಮನೆಗೆ ಬಂದು ಹೋಗಿದ್ದರು.
ಇದೀಗ ಸೋಂಕಿತ ಮಹಿಳೆ ಮೃತಪಟ್ಟ ಹಿನ್ನೆಲೆಯಲ್ಲಿ ನರ್ಸ್ಅನ್ನು ಬಂಟ್ವಾಳದಲ್ಲೇ ಹೋಮ್ ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ. ಇತ್ತ ನರ್ಸ್ ಬಂದು ಹೋದ ಪತಿಯ ಮನೆಯ 9 ತಿಂಗಳ ಮಗು, ಮೂರು ಮಂದಿ ಮಕ್ಕಳು ಸೇರಿದಂತೆ ಒಟ್ಟು 9 ಮಂದಿಯನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ಹೋಮ್ ಕ್ವಾರಂಟೈನ್‍ಗೆ ಒಳಪಡಿಸಿದ್ದಾರೆ.