ಕರ್ನಾಟಕ

karnataka

ETV Bharat / state

ಮಂಗಳೂರಿನಲ್ಲಿ‌‌ ಕೊರೊನಾ ಶಂಕಿತ ಆಸ್ಪತ್ರೆಯಿಂದ ನಾಪತ್ತೆ...! - ಮಂಗಳೂರಿನಲ್ಲಿ‌‌ ಕೊರೊನಾ ಶಂಕಿತ ಆಸ್ಪತ್ರೆಯಿಂದ ನಾಪತ್ತೆ

ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕೊರೊನಾ ಶಂಕಿತ ವ್ಯಕ್ತಿ ನಾಪತ್ತೆಯಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಲು‌ ಹೋಗಿರುವನೆಂದು ಮೂಲಗಳಿಂದ ತಿಳಿದುಬಂದಿದೆ. ಈ ಬಗ್ಗೆ ತನಿಖೆಯಿಂದಷ್ಟೇ ಮಾಹಿತಿ ತಿಳಿದು ಬರಬೇಕಾಗಿದೆ.

Corona Suspected Man
ಮಂಗಳೂರಿನಲ್ಲಿ‌‌ ಕೊರೊನಾ ಶಂಕಿತ ಆಸ್ಪತ್ರೆಯಿಂದ ನಾಪತ್ತೆ...!

By

Published : Mar 9, 2020, 12:09 PM IST

Updated : Mar 9, 2020, 12:28 PM IST

ಮಂಗಳೂರು: ಕೊರೊನಾ ಶಂಕಿತನಾಗಿ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವ್ಯಕ್ತಿ ನಿನ್ನೆ ತಡರಾತ್ರಿ ನಾಪತ್ತೆಯಾದ ಘಟನೆ ನಡೆದಿದೆ.

ಮಂಗಳೂರಿನಲ್ಲಿ‌‌ ಕೊರೊನಾ ಶಂಕಿತ ಆಸ್ಪತ್ರೆಯಿಂದ ನಾಪತ್ತೆ...!

ನಿನ್ನೆ ದುಬೈಯಿಂದ ಬಂದಿದ್ದ ಈತನಿಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಾಗ ಜ್ವರದ ಲಕ್ಷಣ ಕಂಡಿತ್ತು.

ಕೂಡಲೇ ತಪಾಸಣೆ ನಡೆಸಿದ ಆರೋಗ್ಯ ಇಲಾಖೆಯ ಅಧಿಕಾರಿಗಳು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ವಿಶೇಷ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈತ ಇಂದು ಬೆಳಗ್ಗೆ ನೋಡಿದಾಗ ನಾಪತ್ತೆಯಾಗಿದ್ದಾನೆ.

ಈ ಬಗ್ಗೆ ವೆನ್ಲಾಕ್ ಜಿಲ್ಲಾಸ್ಪತ್ರೆಯ ಅಧೀಕ್ಷಕಿ ಡಾ.ರಾಜೇಶ್ವರಿ ದೇವಿ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಅಲ್ಲದೇ ಜಿಲ್ಲಾ ಆರೋಗ್ಯಾಧಿಕಾರಿ‌ಯೂ ಮಾತಿಗೆ ಸಿಗುತ್ತಿಲ್ಲ.

ಕೊರೊನಾ ಶಂಕಿತ ವ್ಯಕ್ತಿಯು ಖಾಸಗಿ ಆಸ್ಪತ್ರೆಗೆ ತಪಾಸಣೆ ನಡೆಸಲು‌ ಹೋಗಿರುವನೆಂದು ಮೂಲಗಳಿಂದ ತಿಳಿದು ಬಂದಿದೆ. ಈ ಬಗ್ಗೆ ತನಿಖೆಯಿಂದಷ್ಟೇ ಮಾಹಿತಿ ತಿಳಿದು ಬರಬೇಕಾಗಿದೆ.

Last Updated : Mar 9, 2020, 12:28 PM IST

ABOUT THE AUTHOR

...view details