ಕರ್ನಾಟಕ

karnataka

ETV Bharat / state

ದ.ಕ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸುತ್ತಿರುವ ಕೊರೊನಾ: ಸಮುದಾಯಕ್ಕೆ ಸೋಂಕು ಹಬ್ಬಿರುವ ಭೀತಿ - ಮಂಗಳೂರು ಕೊರೊನಾ ಸುದ್ದಿ

ಇತ್ತೀಚೆಗೆ ದಕ್ಷಿಣ ಕನ್ನಡದಲ್ಲಿ ಜಿಲ್ಲೆಯಲ್ಲಿಯೇ ನೆಲೆಸಿದ, ಯಾವುದೇ ಪ್ರಯಾಣದ ಹಿಸ್ಟರಿ ಇಲ್ಲದವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ಹಾಗಾಗಿ ಸೋಂಕು ಸಮುದಾಯಕ್ಕೆ ಹಬ್ಬಿರುವ ಭೀತಿ ಎದುರಾಗಿದೆ.

Dakshina Kannada
ದ.ಕ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸುತ್ತಿರುವ ಕೊರೊನಾ: ಸಮುದಾಯಕ್ಕೆ ಹಬ್ಬಿರುವ ಭೀತಿ

By

Published : Jun 30, 2020, 11:49 AM IST

ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕು ಸಮುದಾಯಕ್ಕೆ ಹಬ್ಬಿರುವ ಭೀತಿ ಸೃಷ್ಟಿಸಿದ್ದು, ಜಿಲ್ಲೆಯ ಜನರನ್ನು ಆತಂಕಕ್ಕೀಡುಮಾಡಿದೆ.

ದ.ಕ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸುತ್ತಿರುವ ಕೊರೊನಾ: ಸಮುದಾಯಕ್ಕೆ ಹಬ್ಬಿರುವ ಭೀತಿ
ಜಿಲ್ಲೆಯಲ್ಲಿ ಈವರೆಗೆ 705 ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ 300 ಕ್ಕೂ ಅಧಿಕ ಪ್ರಕರಣಗಳು ಸೌದಿ ಅರೇಬಿಯಾ, ಕತಾರ್, ಮಸ್ಕತ್, ಶಾರ್ಜಾ ಸೇರಿದಂತೆ ವಿವಿಧ ದೇಶಗಳಿಂದ ಬಂದ ಪ್ರಯಾಣಿಕರಲ್ಲಿ ಪತ್ತೆಯಾದವುಗಳು. ನೂರಕ್ಕೂ ಅಧಿಕ ಪ್ರಕರಣ ಮಹಾರಾಷ್ಟ್ರದಿಂದ ಜಿಲ್ಲೆಗೆ ಬಂದ ಪ್ರಯಾಣಿಕರಲ್ಲಿ ಪತ್ತೆಯಾಗಿವೆ. ಅದರೆ ಇತ್ತೀಚೆಗೆ ಪತ್ತೆಯಾಗುತ್ತಿರುವ ಪ್ರಕರಣಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೆಲೆಸಿದ, ಯಾವುದೇ ಪ್ರಯಾಣದ ಹಿಸ್ಟರಿ ಇರದವರಲ್ಲಿ ಪತ್ತೆಯಾಗುತ್ತಿವೆ. ಹೆಚ್ಚಾಗಿ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಳ್ಳುವ ಪ್ರಕರಣ ಮತ್ತು ಐಎಲ್ಐ ಪ್ರಕರಣ ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಉಳ್ಳಾಲ ಭಾಗದಲ್ಲಿ ಹೆಚ್ಚಾಗಿ ಇಂತಹ ಪ್ರಕರಣ ಕಾಣಿಸಿಕೊಳ್ಳುತ್ತಿದ್ದು, ಸೋಂಕು ಸಮುದಾಯಕ್ಕೆ ಹಬ್ಬಿರುವ ಭೀತಿ ವ್ಯಕ್ತವಾಗಿದೆ. ಸೋಮವಾರ 32 ಮಂದಿಗೆ ಕೊರೊನಾ ಕಾಣಿಸಿಕೊಂಡಿದ್ದು ಇದರಲ್ಲಿ ಒಬ್ಬರು ಹೊರ ರಾಜ್ಯದಿಂದ ಬಂದವರು. 9 ಐಎಲ್ ಐ ಪ್ರಕರಣವಾದರೆ 6 ಸಾರಿ(SARI) ಪ್ರಕರಣ, 11 ಮಂದಿ ಕೊರೊನಾ ರೋಗಿಗಳ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಿಂದ, ಸಂಪರ್ಕದ ಮಾಹಿತಿ ಇಲ್ಲದ 5 ಮಂದಿಗೆ ಕೊರೊನಾ ದೃಢಪಟ್ಟಿದೆ.

ನಿನ್ನೆ 4 ಮಂದಿ ಗುಣಮುಖರಾಗಿದ್ದರೆ, ಈವರೆಗೆ ಜಿಲ್ಲೆಯಲ್ಲಿ 14 ಮಂದಿ ಸಾವನ್ನಪ್ಪಿದ್ದು, 426 ಮಂದಿ ಗುಣಮುಖರಾಗಿದ್ದಾರೆ. 265 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ABOUT THE AUTHOR

...view details