ಉಳ್ಳಾಲ(ಮಂಗಳೂರು): ನಗರದ ಮತ್ತಿಬ್ಬರಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಪೈಕಿ ಒಬ್ಬರು ಉಳ್ಳಾಲ ಠಾಣೆಯ ಎಎಸ್‍ಐ ಮತ್ತು ಇನ್ನೋರ್ವ 25ರ ಹರೆಯದ ಯುವಕನಾಗಿದ್ದಾನೆ.
ಉಳ್ಳಾಲದಲ್ಲಿ ಎಎಸ್‍ಐಗೆ ಕೊರೊನಾ ಪಾಸಿಟಿವ್ - ullala police station
ಸೌದಿಯಿಂದ ಬಂದಿದ್ದ ಇಬ್ಬರು ಗೆಳೆಯರನ್ನು ಮಂಗಳೂರಿನಲ್ಲಿ ಭೇಟಿ ಮಾಡಿದ್ದ ಉಳ್ಳಾಲ ಸಮ್ಮರ್ ಸ್ಯಾಂಡ್ ಬಳಿಯ ಫ್ಲ್ಯಾಟ್ ನಿವಾಸಿ 25 ವರ್ಷದ ಯುವಕನಲ್ಲಿಯೂ ಕೊರೊನಾ ಸೋಂಕು ದೃಢವಾಗಿದೆ.
ಉಳ್ಳಾಲದಲ್ಲಿ ಎಎಸ್‍ಐಗೆ ಕೊರೊನಾ ಪಾಸಿಟಿವ್
ಸೌದಿಯಿಂದ ಬಂದಿದ್ದ ಇಬ್ಬರು ಗೆಳೆಯರನ್ನು ಮಂಗಳೂರಿನಲ್ಲಿ ಭೇಟಿ ಮಾಡಿದ್ದ ಉಳ್ಳಾಲ ಸಮ್ಮರ್ ಸ್ಯಾಂಡ್ ಬಳಿಯ ಫ್ಲ್ಯಾಟ್ ನಿವಾಸಿ 25 ವರ್ಷದ ಯುವಕನಲ್ಲಿ ಕೊರೊನಾ ಸೋಂಕು ದೃಢವಾಗಿದೆ. ಈತ ಭೇಟಿ ಮಾಡಿದ್ದ ಇಬ್ಬರು ಗೆಳೆಯರಿಗೆ ಸೋಂಕು ದೃಢವಾದ ಹಿನ್ನೆಲೆಯಲ್ಲಿ, ಪ್ರಾಥಮಿಕ ಸಂಪರ್ಕ ಹೊಂದಿದ್ದ ಇವನನ್ನು ಮನೆಯಲ್ಲೇ ಕ್ವಾರಂಟೈನ್‍ನಲ್ಲಿ ಇರಿಸಲಾಗಿತ್ತು. ಇದೀಗ ಈ ಯುವಕನಲ್ಲಿ ಸೋಂಕು ದೃಢವಾಗಿದೆ.
ಇನ್ನು ಉಳ್ಳಾಲ ಠಾಣಾ ಎಎಸ್‍ಐಗೂ ಸೋಂಕು ಆವರಿಸಿದ್ದು, ಬಂಗೇರಲೇನ್ ನಲ್ಲಿರುವ ವಸತಿ ಸಂಕೀರ್ಣದ ಎಂಟು ಮನೆಗಳ 24 ಮಂದಿಯನ್ನು ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ.