ದಕ್ಷಿಣಕನ್ನಡ: ಜಿಲ್ಲೆಯ ಉಳ್ಳಾಲ ವ್ಯಾಪ್ತಿಯಲ್ಲಿ ಒಂದೇ ದಿನ 50 ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ . ಅದರಲ್ಲೂ ಉಳ್ಳಾಲ ನಗರಸಭೆ ವ್ಯಾಪ್ತಿಯೊಂದರಲ್ಲೇ 48 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ.
ಉಳ್ಳಾಲದಲ್ಲಿ ಬರೋಬ್ಬರಿ 50 ಮಂದಿಗೆ ಕೊರೊನಾ ಪಾಸಿಟಿವ್... ಆತಂಕದಲ್ಲಿ ಜನತೆ! - dakshinakannada news
ದಕ್ಷಿಣಕನ್ನಡ ಜಿಲ್ಲೆಯ ಉಳ್ಳಾಲ ವ್ಯಾಪ್ತಿಯಲ್ಲಿ ಒಂದೇ ದಿನ 50 ಕೊರೊನಾ ಪ್ರಕರಣಗಳು ದೃಢವಾಗಿವೆ. ರ್‍ಯಾಂಡಮ್ ಟೆಸ್ಟ್ ನಡೆಸಿದಾಗ ಹೆಚ್ಚಿನವರಲ್ಲಿ ಸೋಂಕು ಪತ್ತೆಯಾಗಿರುವುದು ಜನರಲ್ಲಿ ಆತಂಕ ಹೆಚ್ಚಿಸಿದೆ.
ಉಳ್ಳಾಲ ವಿಧಾನಸಭಾ ಕ್ಷೇತ್ರದಲ್ಲಿಂದು 50 ಮಂದಿಗೆ ಕೊರೊನಾ ಪಾಸಿಟಿವ್
ರ್‍ಯಾಂಡಮ್ ಟೆಸ್ಟ್ ನಡೆಸಿದಾಗ ಹೆಚ್ಚಿನವರಲ್ಲಿ ಸೋಂಕು ಪತ್ತೆಯಾಗಿದೆ. ಈ ಹಿನ್ನೆಲೆ ಜನರಲ್ಲಿ ಆತಂಕ ಹೆಚ್ಚಾಗಿದೆ. ಉಳ್ಳಾಲದಲ್ಲಿ ಕೊರೊನಾ ಸೋಂಕಿತ ಮಹಿಳೆಯರಿಬ್ಬರು ಸಾವನ್ನಪ್ಪಿದ ಬಳಿಕ ಈವರೆಗೆ 160 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಆದರೂ ಎಚ್ಚೆತ್ತುಕೊಳ್ಳದ ಜನತೆ ಮಾಸ್ಕ್ ಧರಿಸದೆ ಓಡಾಡುತ್ತಿದ್ದಾರೆ. ಉಳ್ಳಾಲ ಜಂಕ್ಷನ್ನಲ್ಲಿಂದು ಕೆಲವರು ಮೀನು ಮಾರಾಟ ನಡೆಸುತ್ತಿದ್ದ ದೃಶ್ಯಗಳು ಕಂಡುಬಂತು.