ಮಂಗಳೂರು:ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ವಿದೇಶದಿಂದ ಬರುವ ಪ್ರಯಾಣಿಕರ ಮೇಲೆ ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ನಿಗಾ ವಹಿಸಲಾಗುತ್ತಿದೆ. ಇಂದು ಐದು ಮಂದಿಯ ಗಂಟಲು ದ್ರವವನ್ನು ತಪಾಸಣೆಗೆ ಕಳುಹಿಸಲಾಗಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.
ಕೊರೊನಾ ಭೀತಿ: ವಿದೇಶಿ ಪ್ರಯಾಣಿಕರ ಮೇಲೆ ದಕ್ಷಿಣ ಕನ್ನಡ ಜಿಲ್ಲಾಡಳಿತ ನಿಗಾ
ಮಂಗಳೂರು ವಿಮಾನ ನಿಲ್ದಾಣ ಮತ್ತು ಎನ್ಎಂಪಿಟಿಯಲ್ಲಿ ಇಂದು ವಿದೇಶದಿಂದ ಬಂದ 614 ಮಂದಿಯನ್ನು ತಪಾಸಣೆ ಮಾಡಲಾಗಿದೆ.
ದ.ಕ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್
ಮಂಗಳೂರು ವಿಮಾನ ನಿಲ್ದಾಣ ಮತ್ತು ಎನ್ಎಂಪಿಟಿಯಲ್ಲಿ ಇಂದು ವಿದೇಶದಿಂದ ಬಂದ 614 ಮಂದಿಯನ್ನು ತಪಾಸಣೆ ಮಾಡಲಾಗಿದೆ.
ವಿದೇಶದಿಂದ ಬಂದ ಪ್ರಯಾಣಿಕರಲ್ಲಿ 50 ಮಂದಿ 14 ದಿನದ ವೈದ್ಯಕೀಯ ನಿಗಾದಲ್ಲಿದ್ದಾರೆ. ಇಂದಿಗೆ 14 ದಿನಗಳ ವೈದ್ಯಕೀಯ ನಿಗಾವನ್ನು 11 ಮಂದಿ ಪೂರೈಸಿದ್ದು, 11ಮಂದಿಯಲ್ಲಿಯೂ ಸೋಂಕು ಇಲ್ಲವೆಂಬುದು ದೃಢಪಟ್ಟಿದೆ. ಮೂವರ ಗಂಟಲು ದ್ರವ ಪರೀಕ್ಷೆಗೆ ವರದಿ ಸ್ವೀಕೃತವಾಗಿದ್ದು, ಇವರಲ್ಲಿ ಕೊರೊನಾ ವೈರಸ್ ಪತ್ತೆಯಾಗಿಲ್ಲ ಎಂದು ಪ್ರಕಟಣೆಯಲ್ಲಿ ಜಿಲ್ಲಾಡಳಿತ ತಿಳಿಸಿದೆ.