ಮಂಗಳೂರು (ದಕ್ಷಿಣ ಕನ್ನಡ):ಕ್ವಾರಂಟೈನ್ನಲ್ಲಿದ್ದಾಗಲೇ ಆತ್ಮಹತ್ಯೆ ಮಾಡಿಕೊಂಡ ಮೂಡಬಿದ್ರೆಯ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಇರುವುದು ಇಂದು ದೃಢಪಟ್ಟಿದೆ. ಮುಂಬೈಯಿಂದ ಬಂದ ಮೂಡಬಿದ್ರೆ ಕಡಂದಲೆ ವ್ಯಕ್ತಿಗೆ ಕಡಂದಲೆ ಶಾಲೆಯಲ್ಲಿ ರಾತ್ರಿ ಕ್ವಾರಂಟೈನ್ ಮಾಡಲಾಗಿತ್ತು.
ಗುರುವಾರ ಬೆಳಗ್ಗೆ ಈ ವ್ಯಕ್ತಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿತ್ತು. ಆತ್ಮಹತ್ಯೆ ಮಾಡಿಕೊಂಡ ಇವರ ಮೃತದೇಹವನ್ನು ವೆನ್ಲಾಕ್ ಆಸ್ಪತ್ರೆಯ ಶವಗಾರದಲ್ಲಿರಿಸಿ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇಂದು ಇದರ ವರದಿ ಬಂದಿದ್ದು, ಈ ವ್ಯಕ್ತಿಗೆ ಕೊರೊನಾ ಇರುವುದು ದೃಢಪಟ್ಟಿದೆ.