ಮಂಗಳೂರು: ದ.ಕ.ಜಿಲ್ಲೆಯ ಮಂಗಳೂರು ತಾಲೂಕಿನ ಕಕ್ಕೆಬೆಟ್ಟು ಶಕ್ತಿನಗರದ ತಾಯಿ-ಮಗನಲ್ಲಿ ಕೊರೊನಾ ಸೋಂಕು ದೃಢಗೊಂಡ ಪರಿಣಾಮ ಆ ಪ್ರದೇಶವನ್ನು ಕಂಟೇನ್ಮೆಂಟ್ ಜೋನ್ ಆಗಿ ಪರಿವರ್ತಿಸಿ, ಸಂಪೂರ್ಣ ಸೀಲ್ಡೌನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಘೋಷಣೆ ಮಾಡಿದ್ದಾರೆ.
ಕಕ್ಕೆಬೆಟ್ಟು, ಶಕ್ತಿನಗರ ಪ್ರದೇಶದಲ್ಲಿ 22 ಮನೆಗಳಿದ್ದು, ನಾಲ್ಕು ಅಂಗಡಿಗಳು ಹಾಗೂ ಒಂದು ಕಚೇರಿ ಇದ್ದು, ಈ ವ್ಯಾಪ್ತಿಯಲ್ಲಿ 120 ಜನರಿದ್ದಾರೆ. ಇದನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಅಲ್ಲದೇ ಕಂಟೇನ್ಮೆಂಟ್ ಜೋನ್ನಿಂದ 5 ಕಿ.ಮೀ. ವ್ಯಾಪ್ತಿಯನ್ನು ಬಫರರ್ ಜೋನ್ ಎಂದು ಘೋಷಣೆ ಮಾಡಲಾಗಿದೆ.