ಬಂಟ್ವಾಳ( ದಕ್ಷಿಣ ಕನ್ನಡ): ಇಂದು ಒಂದೇ ದಿನ ತಾಲೂಕಿನಲ್ಲಿ 24 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಬಂಟ್ವಾಳ ಪುರಸಭಾ ವ್ಯಾಪ್ತಿಯ ಕಸ್ಬಾ ಗ್ರಾಮದಲ್ಲಿ 12 ಜನರಿಗೆ ಕೋವಿಡ್-19 ಸೋಂಕು ತಗುಲಿದೆ.
ಬಂಟ್ವಾಳ ತಾಲೂಕಿನಲ್ಲಿ ಇಂದು ಒಂದೇ ದಿನ 24 ಮಂದಿಗೆ ತಗುಲಿದ ಕೊರೊನಾ! - ಬಂಟ್ವಾಳ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ಕೊರೊನಾ ತನ್ನ ಅಟ್ಟಹಾಸ ಮುಂದುವರೆಸಿದ್ದು, ಇಂದು ಒಂದೇ ದಿನ 24 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದೆ.
ಕಸ್ಬಾದ ಒಂದೇ ಕುಟುಂಬದ 9 ಮಂದಿಗೆ ಸೋಂಕು ತಗಲಿದ್ದು, 1 ವರ್ಷದ ಗಂಡು ಮಗು, 11, 13, 17 ವರ್ಷದ ಬಾಲಕರು ಹಾಗೂ 74, 78 ವರ್ಷದ ವೃದ್ಧರು ಸೇರಿದ್ದಾರೆ. ಕಳೆದ ಕೆಲವು ದಿನಗಳಿಂದ ಬಂಟ್ವಾಳದಲ್ಲಿ ದಿನೇ ದಿನೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ. ಜು. 7ರಂದು 10ಕ್ಕೂ ಅಧಿಕ ಪ್ರಕರಣಗಳು, ಜು. 8ರಂದು 12 ಪ್ರಕರಣಗಳು ಪತ್ತೆಯಾಗಿದ್ದವು.
ತಾಲೂಕಿನ ಮೂಡುನಡುಗೋಡಿನಲ್ಲಿ 2, ಕಸ್ಬಾದಲ್ಲಿ 12, ಪುದು 5, ಬಾಳ್ತಿಲ 1, ಕಳ್ಳಿಗೆ 1, ಸಜಿಪಮೂಡ 1, ಬೋಳಂತೂರು 1, ಪುದು ಗ್ರಾಮದಲ್ಲಿ 5, ಸಂಗಬೆಟ್ಟು ಗ್ರಾಮದಲ್ಲಿ 1 ಪ್ರಕರಣ ದೃಢಪಟ್ಟಿದೆ. ಈಗಾಗಲೇ ಬಂಟ್ವಾಳ ತಾಲೂಕಿನಲ್ಲಿ 50ಕ್ಕೂ ಅಧಿಕ ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿದ್ದು, ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ 4 ಮಂದಿ ಸಾವನ್ನಪ್ಪಿದ್ದಾರೆ.