ಕರ್ನಾಟಕ

karnataka

ETV Bharat / state

ಬಿಜೆಪಿ ಮುಖಂಡನಿಗೆ ಕೊರೊನಾ... ಕಾಂಗ್ರೆಸ್​ ರಾಜಕಾರಣಿಯ ಮನೆಯ ಮೂವರಿಗೆ ಸೋಂಕು - ಬಂಟ್ವಾಳ ತಾಲೂಕಿನಲ್ಲಿ ಕೊರೊನಾ

ಬಂಟ್ವಾಳ ತಾಲೂಕಿನ 8 ಮಂದಿಗೆ ಕೊರೊನಾ ವಕ್ಕರಿಸಿದ್ದು, ಸ್ಥಳೀಯರಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿದೆ.

dswd
ಬಿಜೆಪಿ ಮುಖಂಡನಿಗೆ ಕೊರೊನಾ

By

Published : Jul 5, 2020, 5:31 PM IST

ಬಂಟ್ವಾಳ: ತಾಲೂಕಿನ 8 ಮಂದಿಗೆ ಇಂದು ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಬಿಜೆಪಿ ಮುಖಂಡರೊಬ್ಬರಿಗೆ ಸೋಂಕು ತಗುಲಿದೆ.

ಕಾಂಗ್ರೆಸ್​​ನ ಪ್ರಮುಖ ರಾಜಕಾರಣಿಯ ಮನೆಯ ಮೂವರು ಸದಸ್ಯರಿಗೂ ಕೊರೊನಾ ವಕ್ಕರಿಸಿದೆ. ಎಲ್ಲರೂ ಕ್ಷೇಮವಾಗಿರುವುದಾಗಿ ಕುಟುಂಬದ ಆಪ್ತ ಮೂಲಗಳು ತಿಳಿಸಿವೆ. ಇದರಲ್ಲಿ ಕಾಂಗ್ರೆಸ್​ನ​ 82 ವರ್ಷದ ಹಿರಿಯ ರಾಜಕಾರಣಿಯೂ ಸೇರಿದ್ದಾರೆ.

ಉಳಿದಂತೆ ಪಾಣೆಮಂಗಳೂರಿನ ಯುವಕ, ಕುರಿಯಾಳ ಮತ್ತು ವಗ್ಗದ ತಲಾ ಒಬ್ಬ ಯುವತಿ, ಕುಳ ಗ್ರಾಮದ 50 ವರ್ಷದ ವ್ಯಕ್ತಿ ಸೇರಿದ್ದಾರೆ. 90ರ ವೃದ್ಧೆ, 35ರ ಮಹಿಳೆಗೂ ಕೊರೊನಾ ಸೋಂಕು ತಗುಲಿದೆ.

ABOUT THE AUTHOR

...view details