ಕರ್ನಾಟಕ

karnataka

ETV Bharat / state

ಸುಳ್ಯ ಸರ್ಕಾರಿ ಆಸ್ಪತ್ರೆ ವೈದ್ಯ, ಸಿಬ್ಬಂದಿ ಸೇರಿ ಆರು ಮಂದಿಗೆ ಕೊರೊನಾ: ಆತಂಕದಲ್ಲಿ ಜನತೆ - ಸುಳ್ಯ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿಗೆ ಕೊರೊನಾ ಸುದ್ದಿ

ಸರ್ಕಾರಿ ಆಸ್ಪತ್ರೆಯಲ್ಲಿ ಕೆಲ ದಿನಗಳ ಹಿಂದೆ ದಾಖಲಾದ ವ್ಯಕ್ತಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಬಳಿಕ ಅವರನ್ನು ಮಂಗಳೂರಿಗೆ ಕಳುಹಿಸಲಾಯಿತು. ಆ ನಂತರ ವ್ಯಕ್ತಿಗೆ ಚಿಕಿತ್ಸೆ ‌ನೀಡಿದ್ದ ಕಡಬ ಮೂಲದ ನರ್ಸ್ ಒಬ್ಬರಿಗೆ ಕೂಡ ಕೊರೊನಾ ದೃಢವಾಗಿತ್ತು.

ಒಟ್ಟು ಆರು ಮಂದಿಗೆ ಕೊರೊನಾ
ಒಟ್ಟು ಆರು ಮಂದಿಗೆ ಕೊರೊನಾ

By

Published : Jul 9, 2020, 3:13 PM IST

Updated : Jul 9, 2020, 8:10 PM IST

ಸುಳ್ಯ: ಸರ್ಕಾರಿ ಆಸ್ಪತ್ರೆಯ ಒಬ್ಬರು ವೈದ್ಯ, ನಾಲ್ಕು ಜನ ಸಿಬ್ಬಂದಿ ಹಾಗೂ ಒಬ್ಬರು ರೋಗಿ ಸೇರಿ ಆರು ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯನ್ನು ಇಂದು ಮತ್ತು ನಾಳೆ ಎರಡು ದಿನಗಳ ಮಟ್ಟಿಗೆ ಸೀಲ್ ಡೌನ್ ಮಾಡಲಾಗಿದೆ.

ಸರ್ಕಾರಿ ಆಸ್ಪತ್ರೆಯಲ್ಲಿ ಕೆಲ ದಿನಗಳ ಹಿಂದೆ ದಾಖಲಾದ ವ್ಯಕ್ತಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಬಳಿಕ ಅವರನ್ನು ಮಂಗಳೂರಿಗೆ ಕಳುಹಿಸಲಾಯಿತು. ಆ ನಂತರ ವ್ಯಕ್ತಿಗೆ ಚಿಕಿತ್ಸೆ ‌ನೀಡಿದ್ದ ಕಡಬ ಮೂಲದ ನರ್ಸ್ ಒಬ್ಬರಿಗೆ ಕೂಡ ಕೊರೊನಾ ದೃಢವಾಗಿತ್ತು. ಇದೀಗ ಒಟ್ಟು ಜನರಿಗೆ ಸೋಂಕು ಕಾಣಿಸಿಕೊಂಡಿದೆ.

ಆಸ್ಪತ್ರೆಯಲ್ಲಿ ಈಗ 17 ಮಂದಿ ಒಳರೋಗಿಗಳಿದ್ದು, ಅವರಿಗೆ ಚಿಕಿತ್ಸೆ ನೀಡಲು ಒಬ್ಬರು ವೈದ್ಯಾಧಿಕಾರಿ ಹಾಗೂ ಮೂವರು ನರ್ಸ್​ಗಳಿಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಇಂದು ಮತ್ತು ನಾಳೆ ಆಸ್ಪತ್ರೆಯನ್ನು ಸ್ಯಾನಿಟೈಸ್​ ಮಾಡುವುದರಿಂದ ಆಸ್ಪತ್ರೆಯನ್ನು ಸೀಲ್ ಡೌನ್ ಮಾಡಲಾಗಿದೆ.

ಹೊಸದಾಗಿ ಬರುವ ರೋಗಿಗಳಿಗೆ ಆಸ್ಪತ್ರೆಗೆ ಪ್ರವೇಶವಿರುವುದಿಲ್ಲ. ಹೆರಿಗೆಗೆ ಬರುವವರಿಗೆ ಕೂಡ ಪ್ರವೇಶ ನಿರಾಕರಿಸಲಾಗಿದೆ. ಡಯಾಲಿಸಿಸ್​ಗೆ ಸಹ ಅವಕಾಶವಿರುವುದಿಲ್ಲ ಎಂದು ಆಸ್ಪತ್ರೆಯ ವೈದ್ಯ ಡಾ. ಕರುಣಾಕರ ಕೆ.ವಿ. ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

Last Updated : Jul 9, 2020, 8:10 PM IST

ABOUT THE AUTHOR

...view details