ಬಂಟ್ವಾಳ:ಕೊರೊನಾ ಭೀತಿ ಹಿನ್ನೆಲೆ ಬಂಟ್ವಾಳ ಮಿನಿ ವಿಧಾನಸೌಧ ಪ್ರವೇಶವನ್ನು ಜುಲೈ 10 ರವರೆಗೆ ನಿಷೇಧಿಸಲಾಗಿದೆ.
ತಾಲೂಕಿನಲ್ಲೀಗ ಕೊರೊನಾ ಪ್ರಕರಣಗಳು ಹೆಚ್ಚಳವಾಗುತ್ತಿವೆ. ನಿನ್ನೆ 7 ಕೇಸ್ ದಾಖಲಾಗಿದ್ದವು. ಅಷ್ಟೇ ಅಲ್ಲದೆ, ರಾಜಕಾರಣಿಗಳಿಗೂ ಸೋಂಕು ಬಾಧಿಸುತ್ತಿರುವ ಕಾರಣ ಸಾರ್ವಜನಿಕರು ಸ್ವಯಂ ಜಾಗೃತರಾಗುತ್ತಿದ್ದಾರೆ. ಈ ನಡುವೆ ಬಂಟ್ವಾಳ ಮಿನಿ ವಿಧಾನಸೌಧ ಪ್ರವೇಶವನ್ನು ಜುಲೈ 10ರವರೆಗೆ ನಿಷೇಧಿಸಲಾಗಿದೆ.
ಬಂಟ್ವಾಳ ಮಿನಿ ವಿಧಾನ ಸೌಧ ಬಂದ್ ಬಂಟ್ವಾಳ ಮಿನಿ ವಿಧಾನಸೌಧದಲ್ಲಿರುವ ಸರ್ಕಾರಿ ಕಚೇರಿಗಳನ್ನು ಸ್ಯಾನಿಟೈಸ್ ಮಾಡುವ ಹಿನ್ನೆಲೆಯಲ್ಲಿ ಜುಲೈ 8 ರಿಂದ 10ರವರೆಗೆ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ತಿಳಿಸಿದ್ದಾರೆ.
ಮಂಗಳೂರು ಸಹಾಯಕ ಆಯುಕ್ತರು ಈ ಕುರಿತು ಸೂಚನೆ ನೀಡಿದ್ದು, ಮಂಗಳೂರು ಉಪ ವಿಭಾಗಕ್ಕೆ ಸಂಬಂಧಪಟ್ಟ ಸರ್ಕಾರಿ ಕಚೇರಿಗಳನ್ನು ಸ್ಯಾನಿಟೈಸ್ ಮಾಡಲಾಗುತ್ತಿದೆ. ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಈ ಕ್ರಮ ವಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಇನ್ನೂ ತಾಲೂಕಿನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕೆಲ ಹೋಟೆಲ್ಗಳನ್ನು ಬಂದ್ ಮಾಡಲಾಗಿದೆ.