ಬೆಳ್ತಂಗಡಿ:ಪಟ್ಟಣದಲ್ಲಿ ಪ್ರತೀ ಸೋಮವಾರ ನಡೆಯುವ ವಾರದ ಸಂತೆಯನ್ನು ಹಳೆಕೋಟೆಯಲ್ಲಿರುವ ಎಪಿಎಂಸಿ ಯಾರ್ಡಿಗೆ ಸ್ಥಳಾಂತರ ಮಾಡಲಾಗಿದೆ.
ಕೊರೊನಾ ಎಫೆಕ್ಟ್... ಬೆಳ್ತಂಗಡಿ ವಾರದ ಸಂತೆ ಎಪಿಎಂಸಿಗೆ ಶಿಫ್ಟ್ - beltangadi corona effct news
ವಾರದ ಸಂತೆಯ ಸಂದರ್ಭದಲ್ಲಿ ಮಾರಾಟಗಾರರು ಮತ್ತು ಗ್ರಾಹಕರು ವೈಯಕ್ತಿಕ ಅಂತರ ಕಾಯ್ದುಕೊಳ್ಳದೆ ಇರುವುದನ್ನು ಗಮನಿಸಿದ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಎಪಿಎಂಸಿ ಯಾರ್ಡಿಗೆ ಸಂತೆಯನ್ನು ಸ್ಥಳಾಂತರ ಮಾಡಿಸಿದ್ದಾರೆ.

ಬೆಳ್ತಂಗಡಿ ವಾರದ ಸಂತೆ ಎಪಿಎಂಸಿಗೆ ಶಿಫ್ಟ್
ಪ್ರತೀ ವಾರದ ಸಂತೆಯ ಸಂದರ್ಭದಲ್ಲಿ ಮಾರಾಟಗಾರರು ಮತ್ತು ಗ್ರಾಹಕರು ವೈಯಕ್ತಿಕ ಅಂತರ ಕಾಯ್ದುಕೊಳ್ಳದೆ ಇರುವುದನ್ನು ಗಮನಿಸಿದ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ, ಏಪ್ರಿಲ್ 19 ರಂದು ಬೆಳ್ತಂಗಡಿ ಮಿನಿ ವಿಧಾನಸೌಧದಲ್ಲಿ ತಾಲೂಕಿನ ಸಂಬಂಧಿತ ಇಲಾಖಾಧಿಕಾರಿಗಳ ಸಭೆ ಕರೆದು, ಏಪ್ರಿಲ್ 20ರ ಸೋಮವಾರದಿಂದ ಸಂತೆಯನ್ನು ಎಪಿಎಂಸಿ ಯಾರ್ಡಿಗೆ ತಾತ್ಕಾಲಿಕವಾಗಿ ಸ್ಥಳಾಂತರಿಸುವ ಬಗ್ಗೆ ತೀರ್ಮಾನ ಕೈಗೊಂಡರು.
ನಂತರ ಸ್ಥಳ ಪರಿಶೀಲನೆ ನಡೆಸಿದ ಶಾಸಕ ಹರೀಶ್ ಪೂಂಜಾ, ಅಧಿಕಾರಿಗಳಿಗೆ ಸೂಕ್ತ ಸಲಹೆ-ಸೂಚನೆ ನೀಡಿದರು. ಶಾಸಕ ಹರೀಶ್ ಪೂಂಜಾರ ಈ ತೀರ್ಮಾನದಿಂದ ತಾಲೂಕಿನ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.