ಮಂಗಳೂರು: ಕೊರೊನಾ ಸಂದರ್ಭದಲ್ಲಿ ಸ್ವಚ್ಚತೆಗೆ ಮೊದಲ ಆದ್ಯತೆ ನೀಡಬೇಕಾಗುತ್ತದೆ. ಅದರಲ್ಲಿಯೂ ಗೃಹಬಳಕೆಯ ತ್ಯಾಜ್ಯಗಳ ಸರಿಯಾದ ವಿಲೇವಾರಿ ನಡೆಯಬೇಕಾಗುತ್ತದೆ. ಕೊರೊನಾ ಸಮಸ್ಯೆಗೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ತ್ಯಾಜ್ಯ ಸಂಗ್ರಹದ ಕಾರ್ಯಕ್ಕೆ ಆರಂಭದಲ್ಲಿ ಕೊರೊನಾ ಅಡ್ಡಿಯಾಗಿತ್ತು. ಆದರೆ, ಕೊರೊನಾ ಇದ್ದರೂ ಲಾಕ್ಡೌನ್ ಬಳಿಕ ತ್ಯಾಜ್ಯ ಸಂಗ್ರಹದಲ್ಲಿದ್ದ, ಸಮಸ್ಯೆ ನಿವಾರಣೆಯಾಗಿದೆ. ಇದೀಗ ತ್ಯಾಜ್ಯ ಸಂಗ್ರಹ ಮೊದಲಿನಂತೆ ಮತ್ತೆ ಆರಂಭವಾಗಿದೆ.
ಕೊರೊನಾ ಎಫೆಕ್ಟ್: ಮಂಗಳೂರಿನ ಸಹಜ ಸ್ಥಿತಿಗೆ ಬಂದ ತ್ಯಾಜ್ಯ ಸಂಗ್ರಹ ಸಮಸ್ಯೆ - waste collection problem in Mangalore is now normal
ಕೊರೊನಾ ವೈರಸ್ ಹಾವಳಿ ಬಳಿಕ ತ್ಯಾಜ್ಯ ಸಂಗ್ರಹ ಮಂಗಳೂರು ಪಾಲಿಕೆಗೆ ದೊಡ್ಡ ತಲೆನೋವಾಗಿತ್ತು. ಕೊರೊನಾ ಸಂದರ್ಭದಲ್ಲಿ ಸ್ವಚ್ಚತೆಗೆ ಆದ್ಯತೆ ನೀಡಬೇಕಾಗಿದೆಯಾದರೂ ಹಲವು ಸಮಸ್ಯೆಗಳು ಮಂಗಳೂರು ಪಾಲಿಕೆಗೆ ಎದುರಾಗಿತ್ತು. ಆದರೆ, ಸಮಸ್ಯೆಯೊಂದಿಗೆ ಆರಂಭವಾದ ತ್ಯಾಜ್ಯ ಸಂಗ್ರಹ ಸದ್ಯ ಸಹಜ ಸ್ಥಿತಿಗೆ ಬಂದಿದೆ.
ಮಂಗಳೂರಿನ ತ್ಯಾಜ್ಯ ಸಂಗ್ರಹ ಸಮಸ್ಯೆ ಇದೀಗ ಸಹಜಸ್ಥಿತಿಗೆ
ಮಂಗಳೂರಿನ ತ್ಯಾಜ್ಯ ಸಂಗ್ರಹ ಸಮಸ್ಯೆ ಇದೀಗ ಸಹಜಸ್ಥಿತಿಗೆ
ಕೊರೊನಾ ವೈರಸ್ ಬಂದ ಆರಂಭದಲ್ಲಿ ಮಂಗಳೂರಿನಲ್ಲಿ ತ್ಯಾಜ್ಯ ಸಂಗ್ರಹ ಮಾಡುವ ಕಾರ್ಮಿಕರ ಕೊರತೆ ಬಹಳ ಸಮಸ್ಯೆಯನ್ನುಂಟು ಮಾಡಿತ್ತು. ಕೊರೊನಾ ಭಯದಿಂದ ಹಲವು ಪೌರ ಕಾರ್ಮಿಕರು ಕೆಲಸಕ್ಕೆ ಬರಲು ಹಿಂದೇಟು ಹಾಕಿದ ಪರಿಣಾಮ ನಗರದಾದ್ಯಂತ ತ್ಯಾಜ್ಯ ಸಂಗ್ರಹ ದಿನಂಪ್ರತಿ ನಡೆಯುತ್ತಿರಲಿಲ್ಲ. ಆದರೆ ಆ ಸಮಸ್ಯೆ ಇದೀಗ ಸುಧಾರಿಸಿದೆ.
ಕೊರೊನಾ ಹಾವಳಿಯಿಂದ ಪೌರ ಕಾರ್ಮಿಕರ ಅಲಭ್ಯತೆಯಿಂದ ತ್ಯಾಜ್ಯ ಸಂಗ್ರಹ ಮಾಡಲು ತೊಂದರೆಯಾದರೆ ಕೊರೊನಾ ಸಂದರ್ಭದಲ್ಲಿ ಸ್ವಚ್ಚತೆಗೆ ತೊಂದರೆಯಾಗಿರುವುದು ಜನರ ಆತಂಕಕ್ಕೆ ಕಾರಣವಾಗಿತ್ತು. ಇದೀಗ ತ್ಯಾಜ್ಯ ಸಂಗ್ರಹ ಸಮಸ್ಯೆ ಪರಿಹಾರಗೊಂಡಿರುವುದರಿಂದ ಆತಂಕಕ್ಕೆ ತೆರೆಬಿದ್ದಿದೆ.