ಕರ್ನಾಟಕ

karnataka

ETV Bharat / state

ಕೊರೊನಾ ಭೀತಿ: ಮಂಗಳೂರಿನಿಂದ ಸೌದಿ, ಕತಾರ್, ಕುವೈತ್​ ವಿಮಾನ ರದ್ದು - coronavirus news coronavirus updates

ಕೊರೊನಾ ಭೀತಿ ಇದೀಗ ವಿಮಾನಯಾನದ ಮೇಲೆ ಭಾರೀ ಪರಿಣಾಮ ಬೀರಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸೌದಿ, ಕತಾರ್, ಕುವೈತ್​ಗೆ ತೆರಳುವ ವಿಮಾನಗಳನ್ನು ರದ್ದು ಮಾಡಲಾಗಿದೆ.

Saudi, Qatar and Kuwait flights canceled
ಮಂಗಳೂರಿನಿಂದ ಸೌದಿ, ಕತಾರ್, ಕುವೈತ್​ ವಿಮಾನ ರದ್ದು

By

Published : Mar 17, 2020, 5:06 PM IST

ಮಂಗಳೂರು: ಕೊರೊನಾ ಭೀತಿ ಹಿನ್ನೆಲೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸೌದಿ, ಕತಾರ್, ಕುವೈತ್​ಗೆ​ ತೆರಳುವ ವಿಮಾನಗಳನ್ನು ರದ್ದು ಮಾಡಲಾಗಿದೆ.

ಭಾರತ ಸರ್ಕಾರದ ಸೂಚನೆಯಂತೆ ಈ ದೇಶಗಳಿಗೆ ವಿಮಾನಯಾನ ಸೇವೆಯನ್ನು ರದ್ದುಗೊಳಿಸಲಾಗಿದೆ. ಏರ್ ಇಂಡಿಯಾ ವಿಮಾನ ಮತ್ತು ಸ್ಪೈಸ್ ಜೆಟ್ ವಿಮಾನ ಸೌದಿ ಅರೇಬಿಯಾ, ಕುವೈತ್, ಕತಾರ್​ಗೆ ಸೇವೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದೆ. ದುಬೈ, ಅಬುದಾಬಿ, ಮಸ್ಕತ್​ಗಳಿಗೆ ವಿಮಾನಯಾನ ಸೇವೆ ಎಂದಿನಂತೆ ಮುಂದುವರೆದಿದೆ.


ABOUT THE AUTHOR

...view details