ಮಂಗಳೂರು: ಪವಿತ್ರ ರಂಜಾನ್ ದಿನದಂದು, ಮುಸ್ಲಿಂ ಬಾಂಧವರು ಮಸೀದಿಗಳಿಗೆ ತೆರಳಿ ನಮಾಜ್ ಮಾಡುವುದು ಪದ್ಧತಿ. ಆದರೆ ಈ ಬಾರಿ ಕೊರೊನಾ ಭೀತಿ ಎಲ್ಲೆಡೆ ಆವರಿಸಿದ್ದು, ಎಲ್ಲರೂ ಮನೆಯಲ್ಲಿಯೇ ನಮಾಜ್ ಮಾಡುತ್ತಿದ್ದಾರೆ.
ಮಂಗಳೂರು: ಬಿಕೋ ಎನ್ನುತ್ತಿದೆ ಮಂಗಳೂರು ಈದ್ಗಾ ಜುಮಾ ಮಸೀದಿ - ಪವಿತ್ರ ಹಬ್ಬವಾದ ರಂಜಾನ್ ಮೇಲೆ ಕೊರೊನಾ ಪರಿಣಾಮ
ಮಂಗಳೂರಿನ ಬಾವುಟಗುಡ್ಡೆ ಈದ್ಗಾ ಜುಮಾ ಮಸೀದಿಯಲ್ಲಿ ಪ್ರತಿ ವರ್ಷವೂ ಸಾವಿರಾರು ಮಂದಿ ಸೇರಿ ಸಾಮೂಹಿಕವಾಗಿ ನಮಾಜ್ ನೆರವೇರಿಸುತ್ತಾರೆ. ಆದರೆ ಮಂಗಳೂರಿನ ಖಾಜಿಗಳ ಆದೇಶದಂತೆ ಈ ಬಾರಿ ಯಾವುದೇ ಮುಸ್ಲಿಮರು ಮಸೀದಿ ಕಡೆಗೆ ಬಾರದ ಹಿನ್ನೆಲೆ, ಈದ್ಗಾ ಜುಮಾ ಮಸೀದಿ ಬಿಕೋ ಎನ್ನುತ್ತಿದೆ.
ಇಂದು ಎಲ್ಲಾ ಮಸೀದಿಗಳು ನಮಾಜ್ ಮಾಡುವವರಿಲ್ಲದೇ ಖಾಲಿ ಖಾಲಿಯಾಗಿವೆ. ನಗರದ ಬಾವುಟಗುಡ್ಡೆ ಈದ್ಗಾ ಜುಮಾ ಮಸೀದಿಯಲ್ಲಿ ಪ್ರತಿ ವರ್ಷವೂ ಸಾವಿರಾರು ಮಂದಿ ಸೇರಿ ಸಾಮೂಹಿಕವಾಗಿ ನಮಾಜ್ ನೆರವೇರಿಸುತ್ತಾರೆ. ಆದರೆ ಮಂಗಳೂರಿನ ಖಾಜಿಗಳ ಆದೇಶದಂತೆ ಈ ಬಾರಿ ಯಾವುದೇ ಮುಸ್ಲಿಮರು ಮಸೀದಿ ಕಡೆಗೆ ಬಾರದ ಹಿನ್ನೆಲೆ, ಈದ್ಗಾ ಜುಮಾ ಮಸೀದಿ ಬಿಕೋ ಎನ್ನುತ್ತಿದೆ.
ಪ್ರತೀ ವರ್ಷ ಮಸೀದಿಯ ಒಳಗಡೆ ಸ್ಥಳವಿಲ್ಲದೇ ಸುತ್ತಮುತ್ತಲಿನ ಆವರಣದಲ್ಲಿಯೂ ನಮಾಜ್ ಮಾಡಲಾಗುತ್ತಿತ್ತು. ಇತ್ತ ವಾಹನ ಸಂಚಾರವೂ ಇಲ್ಲದ ಪರಿಣಾಮ ಇಂದು ಎಲ್ಲವೂ ಸ್ತಬ್ಧವಾಗಿದೆ. ಮಸೀದಿಯಲ್ಲಿ ಧರ್ಮಗುರುಗಳ ಹೊರತು ಬೇರೆ ಯಾರೂ ಇಲ್ಲ. ಅಲ್ಲದೆ ಪೊಲೀಸರು ಮಸೀದಿಗೆ ಯಾರೂ ನಮಾಜ್ ನೆರವೇರಿಸಲು ಬಾರದಂತೆ ಹದ್ದಿನ ಕಣ್ಣಿರಿಸಿದ್ದಾರೆ.