ಕರ್ನಾಟಕ

karnataka

ETV Bharat / state

ಕೊರೊನಾ ಭೀತಿ: ದೇವರ ಮೊರೆ ಹೋದ ಜನ, ಕುಡ್ಲದಲ್ಲಿ ಸಾಮೂಹಿಕ ಪಾರ್ಥನೆ - ಮಂಗಳೂರಲ್ಲಿ ಕೊರೊನಾ ಭೀತಿ

ದೇಶವ್ಯಾಪ್ತಿ ಹರಡಿರುವ ಕೊರೊನಾಗೆ ಸಾವಿರಾರು ಜನರು ಬಲಿಯಾಗುತ್ತಿದ್ದು, ಈ ಸಂಕಷ್ಟದಿಂದ ಜನರನ್ನು ರಕ್ಷಿಸುವಂತೆ ಇಂದು ನಗರದ ಮಂದಾರ ಬೈಲು ಶ್ರೀ ವೆಂಕಟರಮಣ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜನರು ಸಾಮೂಹಿಕ ಪ್ರಾರ್ಥನೆ ಮಾಡಿದರು.

ಮಂಗಳೂರಲ್ಲಿ ಜನರಿಂದ ಸಾಮೂಹಿಕ ಪಾರ್ಥನೆ
mass prayer in Mangalore Venkataramana temple

By

Published : Mar 15, 2020, 6:19 PM IST

Updated : Mar 15, 2020, 8:12 PM IST

ಮಂಗಳೂರು:ಜಗತ್ತನ್ನೇ ಬೆಚ್ಚಿಬೀಳಿಸಿದ ಮಹಾಮಾರಿ ಕೊರೊನಾ ಸಂಕಟದಿಂದ ಲೋಕದ ಜನತೆಯನ್ನು ಪಾರು ಮಾಡುವಂತೆ ಮಂದಾರ ಬೈಲು ಶ್ರೀ ವೆಂಕಟರಮಣ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಇಂದು ಸಾಮೂಹಿಕ ಪ್ರಾರ್ಥನೆ ನಡೆಯಿತು.

ಮಂಗಳೂರಲ್ಲಿ ಜನರಿಂದ ಸಾಮೂಹಿಕ ಪಾರ್ಥನೆ

ವಿಪ್ರ ಸಮೂಹ ಕೊಂಚಾಡಿ, ಶಿವಳ್ಳಿ ಸ್ಪಂದನ ದೇರೆಬೈಲು, ಸಮಸ್ತ ಬ್ರಾಹ್ಮಣ ಸಮಾಜ ಬಾಂಧವರು ಹಾಗೂ ಗ್ರಾಮಸ್ಥರು ಸೇರಿಕೊಂಡು ಸಾಮೂಹಿಕ ಧನ್ವಂತರಿ ಮಂತ್ರ ಪಠಣ ಮತ್ತು ವಿಷ್ಣು ಸಹಸ್ರನಾಮ ಪಾರಾಯಣದ ಜೊತೆಗೆ ಲೋಕ ಕಲ್ಯಾಣಾರ್ಥವಾಗಿ ಸಾಮೂಹಿಕ ಪ್ರಾರ್ಥನೆ ನೆರವೇರಿಸಿದರು.

ವೈದ್ಯ ವಿಜ್ಞಾನಕ್ಕೆ ಸವಾಲೊಡ್ಡಿರುವ ಕೊರೊನಾ ಮಹಾಮಾರಿಯನ್ನು ಹಿಮ್ಮೆಟ್ಟಿಸಲು ಸಾರ್ವಜನಿಕರು ದೇವಸ್ಥಾನ, ಮಸೀದಿ, ಚರ್ಚ್​ಗಳಲ್ಲಿ ವಿಶೇಷ ಪ್ರಾರ್ಥನೆ, ಪೂಜೆ, ಪಾರಾಯಣಗಳನ್ನು ಮಾಡುವ ಮೂಲಕ ದೇವರ ಮೊರೆ ಹೋಗಲಾಗುತ್ತಿದೆ.

Last Updated : Mar 15, 2020, 8:12 PM IST

ABOUT THE AUTHOR

...view details