ಕರ್ನಾಟಕ

karnataka

ETV Bharat / state

ಕೊರೊನಾ ಹರಡುವ ಆತಂಕ: ಖಿನ್ನತೆಯಿಂದ ನೇಣಿಗೆ ಶರಣಾದ ವ್ಯಕ್ತಿ - ಕೊರೊನಾ ಹರಡುವ ಆತಂಕ

ಕೊರೊನಾ ವೈರಸ್​ ತನಗೂ ತಗುಲಬಹುದೆಂಬ ಭಯದಿಂದ ಖಿನ್ನತೆಗೆ ಒಳಗಾಗಿದ್ದ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಫರಂಗಿಪೇಟೆಯ ಅಬೆಟ್ಟಿನಲ್ಲಿ ನಡೆದಿದೆ.

ಕೊರೊನಾ ಹರಡುವ ಆತಂಕ
man committed suicide at Mangalore

By

Published : Mar 27, 2020, 12:42 PM IST

ಮಂಗಳೂರು :ಕೊರೊನಾ ವೈಸರ್​ ತನಗೂ ಬರಬಹುದೆಂದ ಭೀತಿಯಲ್ಲಿ ವ್ಯಕ್ತಿಯೋರ್ವ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಫರಂಗಿಪೇಟೆಯ ಅಬೆಟ್ಟು ಎಂಬಲ್ಲಿ ನಡೆದಿದೆ.

ಅಬೆಟ್ಟು ನಿವಾಸಿ ಸದಾಶಿವ ಶೆಟ್ಟಿ (55) ಆತ್ಮಹತ್ಯೆ ಶರಣಾದ ವ್ಯಕ್ತಿ. ಕೊರೊನಾ ವೈರಸ್​ ಹರಡುವ ಭಯದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದನು. ಇದರಿಂದ ಬೇಸತ್ತ ವ್ಯಕ್ತಿ ನಿನ್ನೆ ರಾತ್ರಿ ಮನೆ ಗೋಡೆ ಮೇಲೆ ಕಾರಣ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತ ಪೆಟ್ರೋಲ್ ಬಂಕ್​​ನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಎರಡು ದಿನಗಳ ಹಿಂದೆ ಆತ್ಯಹತ್ಯೆಗೆ ಯತ್ನಿಸಿದ್ದನೆಂತೆ.

ಘಟನೆ ತಿಳಿದು ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details