ಉಡುಪಿ: ದೇಶದಾದ್ಯಂತ ಲಾಕ್ಡೌನ್ ಆದೇಶ ಜಾರಿಯಲ್ಲಿರುವ ಹಿನ್ನೆಲೆ ರಾಜ್ಯದಲ್ಲಿ ದಿನಗೂಳಿ ಕಾರ್ಮಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಇಂದು ಉಡುಪಿಯಲ್ಲಿ ಬಡವರಿಗೆ, ನಿರಾಶ್ರಿತರಿಗೆ ಮತ್ತು ಕೂಲಿ ಕಾರ್ಮಿಕರಿಗೆ ಹಲವಾರು ಸಂಘ ಸಂಸ್ಥೆಗಳು, ಸಮಾಜಸೇವಕರು ಮೂರು ಹೊತ್ತಿನ ಊಟೋಪಚಾರ ಮಾಡಿದ್ದಾರೆ.
ಬಡ ಕೂಲಿ ಕಾರ್ಮಿಕರ ಜೊತೆ ಹುಟ್ಟುಹಬ್ಬ ಆಚರಿಸಿ ಊಟ ಹಾಕಿದ ನಿವೃತ್ತ ಅಧಿಕಾರಿ - ಉಡುಪಿ ಕೊರೊನಾ ಪ್ರಕರಣ
ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಅಧಿಕಾರಿ ಜಯರಾಮ ರಾವ್ ತಮ್ಮ 63ನೇ ಹುಟ್ಟು ಹಬ್ಬವನ್ನು ನಿರಾಶ್ರಿತರು, ಕೂಲಿ ಕಾರ್ಮಿಕರ ಜೊತೆ ಆಚರಿಸಿ, ಸುಮಾರು 2000 ಜನರಿಗೆ ಊಟೋಪಚಾರದ ವ್ಯವಸ್ಥೆ ಮಾಡಿದರು.
ಈ ನಡುವೆ ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಅಧಿಕಾರಿ ಜಯರಾಮ ರಾವ್ ತಮ್ಮ 63ನೇ ಹುಟ್ಟುಹಬ್ಬವನ್ನು ನಿರಾಶ್ರಿತರು, ಕೂಲಿ ಕಾರ್ಮಿಕರ ಜೊತೆ ಆಚರಿಸಿದರು. ಸುಮಾರು 2000 ಜನರಿಗೆ ಊಟೋಪಚಾರದ ವ್ಯವಸ್ಥೆ ಮಾಡಿದ್ದರು.
ಉಡುಪಿ ನಗರದ 10 ಕಡೆ ಮಧ್ಯಾಹ್ನದ ಅನ್ನದಾನ ವ್ಯವಸ್ಥೆ ಮಾಡಿ ವಿಶೇಷ ರೀತಿಯಲ್ಲಿ ಸದಾ ಕಾಲ ನೆನಪಿನಲ್ಲಿ ಇರುವಂತೆ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಜಯರಾಮ್ ಅವರ ಪತ್ನಿ ವೀಣಾ ರಾವ್ ಜೊತೆಗಿದ್ದು ಊಟ ವಿತರಣೆ ಮಾಡಿದರು. ಕಡಿಯಾಳಿ ಗಣೇಶೋತ್ಸವ ಸಮಿತಿ ಮೂಲಕ ಅನ್ನದಾನ ಮಾಡಿದ್ದು, ವ್ಯವಸ್ಥಾಪಕ ಮಂಜುನಾಥ್ ಹೆಬ್ಬಾರ್, ಶಾಸಕ ರಘುಪತಿ ಭಟ್, ಮೇಲ್ವಿಚಾರಕ ರಾಘವೇಂದ್ರ ಕಿಣಿ, ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.