ಬಂಟ್ವಾಳ :ಒಂದೇ ಬೀದಿಯ ಅಕ್ಕಪಕ್ಕದ ಮನೆಗಳ ಮೂವರನ್ನು ಕೊರೊನಾ ಬಲಿ ಪಡೆದಿದೆ. ಇದು ಬಂಟ್ವಾಳ ಪೇಟೆ ಜನರ ಆತಂಕಕ್ಕೂ ಕಾರಣವಾಗಿದೆ.
ಬಂಟ್ವಾಳ ಪೇಟೆಯ ಕಸಬಾಕ್ಕೆ ಒಳಪಡುವ 67 ವರ್ಷದ ಮಹಿಳೆ ಕೊರೊನಾ ಸೋಂಕಿಗೆ ನಿನ್ನೆ ಮೃತಪಟ್ಟಿದ್ದಾರೆ. ಈ ಮಹಿಳೆಯ ಪಕ್ಕದ ಮನೆಯ ಸೊಸೆ, ಅತ್ತೆ ಕ್ರಮವಾಗಿ ಏ.19, ಏ.23ರಂದು ಮೃತಪಟ್ಟರೆ, ಸೊಸೆ ಮಗಳು ಕೊರೊನಾ ಸೋಂಕಿನಿಂದ ಆಸ್ಪತ್ರೆಯಲ್ಲಿದ್ದಾರೆ.
ನಿನ್ನೆ ಮೃತಪಟ್ಟ ಮಹಿಳೆ ಕ್ರೋನಿಕ್ ಓಬ್ ಸ್ಟ್ರಕ್ಟಿವ್ ಪಲ್ಮೋನರಿ ರೋಗದಿಂದ ಹಾಗೂ ಮಧುಮೇಹದಿಂದಲೂ ಬಳಲುತ್ತಿದ್ದರು. ಐಸಿಯುನಲ್ಲಿ ವೆಂಟಿಲೇಟರ್ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಸಂಜೆ 5.40ಕ್ಕೆ ಅವರು ನಿಧನ ಹೊಂದಿದರು.
ಶವಸಂಸ್ಕಾರಕ್ಕೆ ಜಿಲ್ಲಾಡಳಿತ ಹರಸಾಹಸ ಮಾಡಬೇಕಾಯಿತು. ಆದರೆ, ಗುರುವಾರ ಮೃತಪಟ್ಟ ಮಹಿಳೆಯ ಶವಸಂಸ್ಕಾರ ಮಂಗಳೂರಿನಲ್ಲಿ ನಡೆಯಿತು.