ಕರ್ನಾಟಕ

karnataka

ETV Bharat / state

ಭಾಗವತ ಪಟ್ಲ ಸತೀಶ್ ಶೆಟ್ಟಿಗೆ ಅವಮಾನ.. ಕಟೀಲು ಯಕ್ಷಗಾನ ಮೇಳದಲ್ಲಿ ಮತ್ತೆ ಭುಗಿಲೆದ್ದ ವಿವಾದ.. - yakshagana Controversy upadate

ಪಟ್ಲ ಸತೀಶ್ ಶೆಟ್ಟಿಗೆ ಯಕ್ಷಗಾನ ನಡೆಯುವ ಸಂದರ್ಭದಲ್ಲಿ ಅವಮಾನ ಮಾಡಲಾಗಿದೆ. ಅವರ ಅಭಿಮಾನಿಗಳ ಮುಂದೆ ವೇದಿಕೆಗೆ ಅವರನ್ನು ಕರೆದು ಮತ್ತೆ ಕಳುಹಿಸಲಾಗಿದೆ ಎಂದು ವಿವಾದ ಆರಂಭವಾಗಿದೆ.

ಕಟೀಲು ಯಕ್ಷಗಾನ ಮೇಳದಲ್ಲಿ ಮತ್ತೆ ಭುಗಿಲೆದ್ದ ವಿವಾದ

By

Published : Nov 23, 2019, 3:58 PM IST

ಮಂಗಳೂರು: ಕಟೀಲು ಯಕ್ಷಗಾನ ಮೇಳದ ವಿವಾದ ಭುಗಿಲೆದ್ದಿದ್ದು ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿಯವರಿಗೆ ಯಕ್ಷಗಾನ ಪ್ರಸಂಗದಲ್ಲಿ ಅವಮಾನ ಮಾಡಿದ ಘಟನೆ ನಡೆದಿದೆ.

ಕಟೀಲು ಯಕ್ಷಗಾನ ಮೇಳದಲ್ಲಿ ಮತ್ತೆ ಭುಗಿಲೆದ್ದ ವಿವಾದ..

ಈ ವರ್ಷದ ಕಟೀಲು ಯಕ್ಷಗಾನದ ತಿರುಗಾಟ ನಿನ್ನೆ ಆರಂಭವಾಗಿದ್ದು, ಮೊದಲ ದಿನವೇ ಪಟ್ಲ ಸತೀಶ್ ಶೆಟ್ಟಿ ಅಭಿಮಾನಿಗಳ ಮುಂದೆ ಅವಮಾನ ಮಾಡಲಾಗಿದೆ.ನಿನ್ನೆ ರಾತ್ರಿ ಕಟೀಲು ಮೇಳದ ಆರು ಮೇಳಗಳ ಪ್ರಸಂಗ ಏಕಕಾಲದಲ್ಲಿ ಕಟೀಲು ದೇವಾಲಯದಲ್ಲಿ ಆಯೋಜಿಸಲಾಗಿತ್ತು. ಇದರಲ್ಲಿ ಈ ಹಿಂದಿನಂತೆ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ ಭಾಗವತ ನಿರ್ವಹಿಸಲು ವೇದಿಕೆಗೆ ಬಂದಿದ್ದರು. ಆದರೆ, ಅವರು ವೇದಿಕೆ ಏರಿ ಕೂರುತ್ತಿದ್ದಂತೆ ಅವರನ್ನು ವಾಪಸು ಕರೆಸಲಾಗಿದೆ. ಈ ಮೂಲಕ ಯಕ್ಷಗಾನ ಅಭಿಮಾನಿಗಳ ಮುಂದೆಯೇ ಅವರಿಗೆ ಅವಮಾನ ಮಾಡಲಾಗಿದೆ.

ಯಕ್ಷಗಾನ ಮೇಳ ನಿರ್ವಹಣೆ ಸಂಬಂಧಿಸಿ ವಿವಾದವು ಹೈಕೋರ್ಟ್ ಮೆಟ್ಟಿಲೇರಿತ್ತು. ಇದರಲ್ಲಿ ಪಟ್ಲ ಸತೀಶ್ ಶೆಟ್ಟಿ ಕಲಾವಿದರ ಪರ ಇದ್ದರೆಂದು ಅವರನ್ನು ವೇದಿಕೆಗೆ ಕರೆದು ಅವಮಾನ ಮಾಡಲಾಗಿದೆ ಎಂದು ಹೇಳಲಾಗಿದೆ.

ABOUT THE AUTHOR

...view details