ಮಂಗಳೂರು: ಕರಾವಳಿಯಲ್ಲಿ ಮಳೆ ಬಿರುಸು ಪಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಅಲ್ಲಲ್ಲಿ ಭೂ ಕುಸಿತ, ಕಟ್ಟಡ ಕುಸಿತದ ಘಟನೆಗಳು ಸಂಭವಿಸಿವೆ.
ಕರಾವಳಿಯಲ್ಲಿ ಮುಂದುವರೆದ ಮಳೆ: ದ.ಕ. ಜಿಲ್ಲೆಯ ವಿವಿಧೆಡೆ ಭೂ, ಕಟ್ಟಡ ಕುಸಿತ - ಮಂಗಳೂರು, ಮುಂದುವರೆದ ಮಳೆ, ಕರಾವಳಿಯಲ್ಲಿ ಮಳೆ, ಪರಿಹಾರ ಕಾರ್ಯ, ಮಳೆಗೆ ಭೂ ಕುಸಿತ, ಕಟ್ಟಡ ಕುಸಿತ.
ಕರಾವಳಿಯಾದ್ಯಂತ ಧಾರಾಕಾರ ಮಳೆಯಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಭೂ ಕುಸಿತ, ಕಟ್ಟಡ ಕುಸಿತದಿಂದ ಹಾನಿ ಸಂಭವಿಸಿದೆ.

ಮಳೆಯ ಆರ್ಭಟಕ್ಕೆ ಭೂ ಕುಸಿತ
ಪುತ್ತೂರು ತಾಲೂಕಿನ ನರಿಮೊಗರು ಎಂಬಲ್ಲಿ ಶಾಲಾ ಶೌಚಾಲಯ ಕಟ್ಟಡದ ಮೇಲೆ ಮರದ ಕೊಂಬೆ ಮುರಿದು ಬಿದ್ದ ಪರಿಣಾಮ ಓರ್ವ ವಿದ್ಯಾರ್ಥಿ ಗಾಯಗೊಂಡಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಮಂಗಳೂರು ನಗರದ ಆಕಾಶಭವನದಲ್ಲಿ ಲಘು ಭೂಕುಸಿತವಾದ ಪರಿಣಾಮ ಮನೆಯೊಂದಕ್ಕೆ ಹಾನಿಯಾಗಿದೆ. ಸ್ಥಳಕ್ಕೆ ಧಾವಿಸಿದ ಮಹಾನಗರಪಾಲಿಕೆಯ ಅಧಿಕಾರಿಗಳು ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ.