ಪುತ್ತೂರು:ಉಪ್ಪಿನಂಗಡಿ-ಪುತ್ತೂರು ನಡುವಣ ರಸ್ತೆಯನ್ನು ಚತುಷ್ಪಥಗೊಳಿಸುವ ಕಾಮಗಾರಿ ನಡೆದಿದ್ದು, ಈ ಸಂದರ್ಭದಲ್ಲಿ ಪರಿಸರ ಸಂರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು. ಮನುಷ್ಯನ ಸಹಜೀವಿಯಾಗಿರುವ ಪುರಾತನ ಕಾಲದ ಮರಗಳನ್ನು ಉಳಿಸಿಕೊಂಡು ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಪ್ರಜಾ ಸೇವಾ ವೇದಿಕೆ, ಕರ್ನಾಟಕ ರಾಜ್ಯ ರೈತಸಂಘ-ಹಸಿರುಸೇನೆ, ಪ್ರಗತಿಪರ ಕೃಷಿಕರು ಹಾಗೂ ಪರಿಸರ ಚಿಂತಕರು ಆಗ್ರಹಿಸಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಪುತ್ತೂರು ಪ್ರಜಾ ಸೇವಾ ವೇದಿಕೆಯ ಅಧ್ಯಕ್ಷ ಮುರಳೀಧರ್ ರೈ ಮಠಂತಬೆಟ್ಟು, ಪುತ್ತೂರು-ಉಪ್ಪಿನಂಗಡಿ ರಸ್ತೆಯ ಹಾರಾಡಿಯಿಂದ ಕೇಪುಳು ತನಕ ರಸ್ತೆಯನ್ನು ಎರಡು ವರ್ಷಗಳ ಹಿಂದೆ ಚತುಷ್ಪಥಗೊಳಿಸಲಾಗಿತ್ತು. ಇದೀಗ ಕೇಪುಳು ಎಂಬಲ್ಲಿಂದ ಸೇಡಿಯಾಪು ತನಕದ ರಸ್ತೆಯನ್ನು ಚತುಷ್ಪಥಗೊಳಿಸುವ ಕೆಲಸ ಆರಂಭವಾಗಿದೆ. ಈ ಭಾಗದಲ್ಲಿ ನೂರಾರು ಮರಗಳು ರಸ್ತೆ ಕಾಮಗಾರಿ ಹಿನ್ನಲೆಯಲ್ಲಿ ನಾಶವಾಗಲಿದೆ. ಆದರೆ ಪರ್ಯಾಯವಾಗಿ ಮರಗಳನ್ನು ನಡೆಸಲು ಯಾರೂ ಮುಂದಾಗುತ್ತಿಲ್ಲ ಎಂದು ದೂರಿದರು.
ಪುತ್ತೂರು ಉಪ್ಪಿನಂಗಡಿ ರಸ್ತೆಯ ಇಕ್ಕೆಲಗಳಲ್ಲಿಯೂ ಫಲವತ್ತಾದ ಹಣ್ಣಿನ ಮರಗಳಾದ ಹಲಸು, ಮಾವು, ಆಲ ಮುಂತಾದ ಪುರಾತನ ಮರಗಳಿದ್ದವು. ಈ ಮರಗಳನ್ನು ಕಡಿದು ಪ್ರಕೃತಿ ವಿನಾಶಕ್ಕೆ ಮುನ್ನುಡಿ ಬರೆಯಲಾಗಿದೆ. ಮರಗಳ ನಾಶದಿಂದಲೇ ಪ್ರಕೃತಿ ಅವಘಡಗಳು ನಡೆಯುತ್ತಿರುವುದು ಎರಡು ವರ್ಷಗಳಿಂದ ಕಂಡುಬರುತ್ತಿದೆ. ಇದಕ್ಕೆ ಪರಿಹಾರವಾಗಿರುವ ಪರಿಸರ ಸಂರಕ್ಷಣೆಯತ್ತ ಯಾವುದೇ ಜನಪ್ರತಿನಿಧಿಗಳಾಗಲೀ, ಇಲಾಖೆಗಳಾಗಲೀ ಕಾಳಜಿ ವಹಿಸುತ್ತಿಲ್ಲ ಎಂದು ಆರೋಪಿಸಿದರು.
ಒಂದೇ ಒಂದು ಮರ ನೆಟ್ಟಿಲ್ಲ: