ಕರ್ನಾಟಕ

karnataka

ETV Bharat / state

ನರೇಗಾ ಯೋಜನೆಯಡಿ ದ.ಕ ಜಿಲ್ಲೆಯಲ್ಲಿ ತೆರೆದ ಬಾವಿ ನಿರ್ಮಾಣ: ಮಂಗಳೂರಿಗೆ ಅಗ್ರಸ್ಥಾನ - ಮಂಗಳೂರು ಸುದ್ದಿ

ಮಂಗಳೂರಿನಲ್ಲಿ ತೆರೆದ ಬಾವಿ ನಿರ್ಮಾಣಕ್ಕೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದ್ದು, ಈವರೆಗೆ 177 ತೆರೆದ ಬಾವಿಗಳನ್ನು ನಿರ್ಮಾಣ ಮಾಡಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿಯೇ ಮಂಗಳೂರು ಬಾವಿ ನಿರ್ಮಾಣದಲ್ಲಿ ಅಗ್ರಸ್ಥಾನ ತನ್ನದಾಗಿಸಿಕೊಂಡಿದೆ.

ನರೇಗಾ ಯೋಜನೆ
ನರೇಗಾ ಯೋಜನೆ

By

Published : Jun 24, 2021, 9:26 PM IST

ಮಂಗಳೂರು:ಅಂತರ್ಜಲ ಅಭಿವೃದ್ಧಿಗಾಗಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ, ಜಲಶಕ್ತಿ ಅಭಿಯಾನದ ಮೂಲಕ ಎ.1 ರಿಂದ 100 ದಿನಗಳ ತೆರೆದ ಬಾವಿ ನಿರ್ಮಾಣಕ್ಕೆ ಚಾಲನೆ ದೊರಕಿದೆ. ಈ ಮೂಲಕ ದ.ಕ.ಜಿಲ್ಲೆಯಲ್ಲಿ ಮಂಗಳೂರು ತಾಲೂಕು ಅಗ್ರಸ್ಥಾನ ಪಡೆದಿದೆ.

ದ.ಕ.ಜಿಲ್ಲೆಯಲ್ಲಿ ಪ್ರಸ್ತುತ 759 ತೆರೆದ ಬಾವಿ ನಿರ್ಮಾಣವಾಗುತ್ತಿದೆ. ಮಂಗಳೂರಿನಲ್ಲಿ ತೆರೆದ ಬಾವಿ ನಿರ್ಮಾಣಕ್ಕೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದ್ದು, ಈವರೆಗೆ 177 ತೆರೆದ ಬಾವಿಗಳನ್ನು ನಿರ್ಮಾಣ ಮಾಡಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿಯೇ ಮಂಗಳೂರು ಬಾವಿ ನಿರ್ಮಾಣದಲ್ಲಿ ಅಗ್ರಸ್ಥಾನ ತನ್ನದಾಗಿಸಿಕೊಂಡಿದೆ.

ಅಂತರ್ಜಲ ಟಾಸ್ಕ್ ಫೋರ್ಸ್ ನಡಿ ವರ್ಷಂಪ್ರತಿ ನಡೆಸುವ ಮೌಲ್ಯಮಾಪನದಿಂದ ತೆರೆದ ಬಾವಿಯ ನೀರಿನ ಬಳಕೆದಾರರ ಸಂಖ್ಯೆಯು ಹೆಚ್ಚಳವಾಗುತ್ತಿದೆ. ನರೇಗಾ ಯೋಜನೆಯಡಿ 15 ಅಡಿ ಆಳ‌ ಹಾಗೂ 8 ಅಡಿ ಸುತ್ತಳತೆಯ ತೆರೆದ ಬಾವಿ ನಿರ್ಮಿಸಲಾಗುತ್ತದೆ. ಈ ಬಾವಿಗೆ 1.25 ಲಕ್ಷ ರೂ. ಪಾವತಿಸಲು ಅವಕಾಶವಿದೆ. ಇನ್ನೂ ಹೆಚ್ಚಿನ ಆಳ ಹಾಗೂ ಅಗಲ ಬೇಕಾದಲ್ಲಿ ಇದರ ಖರ್ಚನ್ನು ಫಲಾನುಭವಿಗಳೇ ಭರಿಸಬೇಕಾಗುತ್ತದೆ. ಮಂಗಳೂರು ತಾಲೂಕಿನಲ್ಲಿ ನರೇಗಾ ಯೋಜನೆಯಲ್ಲಿ ತೆರೆದ ಬಾವಿ ನಿರ್ಮಾಣಕ್ಕೆ 40,076 ಮಾನವ ದಿನಗಳನ್ನು ವಿನಿಯೋಗಿಸಲಾಗಿದೆ‌.

ABOUT THE AUTHOR

...view details