ಕರ್ನಾಟಕ

karnataka

ETV Bharat / state

ಕರ್ನಾಟಕದಲ್ಲಿ ಎನ್​ಆರ್​ಸಿ ಜಾರಿಗೊಳಿಸಿದ್ರೆ ರಾಜ್ಯವೇ ಹೊತ್ತಿ ಉರಿಯಲಿದೆ: ಖಾದರ್ ಎಚ್ಚರಿಕೆ

ದ.ಕ.ಜಿಲ್ಲಾ ಕಾಂಗ್ರೆಸ್ ವತಿಯಿಂದ ಕೇಂದ್ರ ಸರ್ಕಾರದ ಎನ್​ಆರ್​ಸಿ ಕಾಯ್ದೆಯ ವಿರುದ್ಧ ಇಂದು ಸಂಜೆ ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ಧರಣಿ ಸತ್ಯಾಗ್ರಹ ನಡೆಯಿತು.

U.T Khader
ಯು.ಟಿ.ಖಾದರ್

By

Published : Dec 17, 2019, 11:00 PM IST

ಮಂಗಳೂರು:ಎನ್​ಆರ್​ಸಿ ಜಾರಿಯಿಂದ ಇಡೀ ದೇಶವೇ ಹೊತ್ತಿ ಉರಿಯುತ್ತಿದ್ದರೂ, ಕರ್ನಾಟಕ ರಾಜ್ಯ ಶಾಂತಿಯುತವಾಗಿದೆ. ಆದರೆ ರಾಜ್ಯದಲ್ಲಿ ಕೂಡಾ ಎನ್​ಆರ್​ಸಿಯನ್ನು ಜಾರಿಗೊಳಿಸುವ ಯತ್ನ ಮಾಡಿದರೆ, ಇಡೀ ರಾಜ್ಯ ಹೊತ್ತಿ ಉರಿಯಲಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಸಚಿವ ಯು.ಟಿ.ಖಾದರ್

ದ.ಕ.ಜಿಲ್ಲಾ ಕಾಂಗ್ರೆಸ್ ವತಿಯಿಂದ ಕೇಂದ್ರ ಸರ್ಕಾರದ ಎನ್​ಆರ್​ಸಿ ಕಾಯ್ದೆಯ ವಿರುದ್ಧ ಇಂದು ಸಂಜೆ ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ನಡೆದ ಧರಣಿ ಸತ್ಯಾಗ್ರಹ ಉದ್ದೇಶಿಸಿ ಮಾತನಾಡಿದ ಅವರು, ದ‌.ಕ.ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರನ್ನು ಬಿಜೆಪಿಯ ಶಾಸಕರು ದೇಶದ್ರೋಹಿ ಎಂದು ಕರೆದಿದ್ದರು. ನಿಮಗೆ ತಾಕತ್ತಿದ್ದರೆ ಮಹಾತ್ಮ ಗಾಂಧಿಯವರನ್ನು ಗುಂಡಿಕ್ಕಿ ಕೊಂದ ನಾಥೂರಾಂ ಗೋಡ್ಸೆಯನ್ನು ದೇಶದ್ರೋಹಿ ಹಾಗೂ ಭಯೋತ್ಪಾದಕರೆಂದು ಕರೆಯಿರಿ ಎಂದು ಸವಾಲೆಸೆದರು.

ಭಾರತ ಇಂದು ಹೊತ್ತಿ ಉರಿಯುತ್ತಿದೆ ಅಂದರೆ ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಅವರೇ ಕಾರಣ. ಅದಕ್ಕಾಗಿ ಈ ದೇಶದ ಸರ್ವ ಜನರೂ ಜಾತಿ, ಮತ, ಭೇದ ಮರೆತು ಭಾರತ ದೇಶವನ್ನು ಉಳಿಸಲು ಇಲ್ಲಿಂದಲೇ ಹೋರಾಟ ಪ್ರಾರಂಭಿಸಬೇಕು. ಎನ್​ಆರ್​ಸಿ ಮೂಲಕ ತಂದ ಸಿಎಬಿ ಮಸೂದೆ ಸಂವಿಧಾನಕ್ಕೆ ವಿರುದ್ಧವಾದುದು. ಇದನ್ನು ಈ ದೇಶದಲ್ಲಿ ಯಾರೂ ಕೂಡಾ ಸಹಿಸಲು ಸಾಧ್ಯವಿಲ್ಲ. ಕಾಂಗ್ರೆಸ್​ನ ಕಾರ್ಯಕರ್ತರಾಗಿ ನಾವು ಯಾರೂ ಎನ್​ಆರ್​ಸಿಗೆ ನಮ್ಮ ಮಾಹಿತಿ ನೀಡುವುದಿಲ್ಲ. ಕೇಂದ್ರ ಸರ್ಕಾರ ಪೌರತ್ವವಲ್ಲ, ನಮ್ಮ ಜೀವ ತೆಗೆದರೂ ಎನ್​ಆರ್​ಸಿಗೆ ನಮ್ಮ ಬೆಂಬಲವಿಲ್ಲ. ಇಡೀ ಭಾರತದಲ್ಲಿ ತಾನು ಭಾರತೀಯ, ನಿಜವಾದ ದೇಶ ಪ್ರೇಮಿ‌ ಎಂದು ಸರ್ಟಿಫಿಕೇಟ್ ಪಡೆದು ಸಾಬೀತು ಮಾಡಬೇಕಿದ್ದರೆ ಅದು ಅಮಿತ್ ಷಾ ಹಾಗೂ ನರೇಂದ್ರ ಮೋದಿ ಮಾಡಬೇಕು ಎಂದು ಯು.ಟಿ.ಖಾದರ್ ಕಿಡಿ ಕಾರಿದರು.

ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಭಾರತವನ್ನು ಬ್ರಿಟಿಷರು ವಿಭಜನೆ ಮಾಡಿದ ರೀತಿಯಲ್ಲಿ ಮಾರಕ ಕಾನೂನುಗಳನ್ನು ಜಾರಿಗೊಳಿಸಿ ದೇಶದ್ರೋಹದ ಕೃತ್ಯ ನಡೆಸುತ್ತಿದ್ದಾರೆ. ಒಂದೊಂದು ಚುನಾವಣೆಗೂ ಒಂದೊಂದು ಕಾನೂನು ಜಾರಿಗೊಳಿಸುತ್ತಿದ್ದಾರೆ‌. ಉತ್ತರ ಪ್ರದೇಶದ ಚುನಾವಣೆ ಸಂದರ್ಭ ನೋಟ್ ಬ್ಯಾನ್, ಹರಿಯಾಣ - ಮಹಾರಾಷ್ಟ್ರ ಚುನಾವಣೆಗೆ 370ನೇ ವಿಧಿ ರದ್ದು, ಈಗ ಜಾರ್ಖಾಂಡ್ ಹಾಗೂ ಪಶ್ಚಿಮ ಬಂಗಾಳದ ಚುನಾವಣೆ ಬರುತ್ತದೆ ಎಂದು ಜನರನ್ನು ಭಾವನಾತ್ಮಕವಾಗಿ ಸೆಳೆಯುವ ಯತ್ನ ಮಾಡುತ್ತಿದ್ದಾರೆ ಎಂದು ಯು.ಟಿ‌.ಖಾದರ್ ಆರೋಪಿಸಿದರು.

ABOUT THE AUTHOR

...view details