ಕರ್ನಾಟಕ

karnataka

ETV Bharat / state

ಸೆ.20ರಂದು ರಾಜ್ಯಾದ್ಯಂತ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್​ ಪ್ರತಿಭಟನೆ - ಕಾಂಗ್ರೆಸ್​ ಪ್ರತಿಭಟನೆ

ಕೊರೊನಾ ಭ್ರಷ್ಟಾಚಾರ, ಡಿಜೆ ಹಳ್ಳಿ ಪ್ರಕರಣ, ಡ್ರಗ್ಸ್​ ಪ್ರಕರಣ ಹಾಗೂ ರೈತರಿಗೆ ಮಾರಕವಾದ ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆಗಳ ಕುರಿತು ಸೆಪ್ಟಂಬರ್​ 21ರಿಂದ ನಡೆಯಲಿರುವ ಕಲಾಪದಲ್ಲಿ ಪ್ರಶ್ನೆ ಹಾಕುತ್ತೇವೆ..

Congress protest against bjp corruption
ಕಾಂಗ್ರೆಸ್​ ಕಮಿಟಿ ಕಾರ್ಯಕಾರಿ ಅಧ್ಯಕ್ಷ ಸಲೀಂ ಅಹ್ಮದ್

By

Published : Sep 13, 2020, 8:18 PM IST

ಮಂಗಳೂರು :ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕೊರೊನಾ ಹೆಸರಲ್ಲಿ ಬಿಜೆಪಿ ಸರ್ಕಾರ ಎಸಗಿದ ಭ್ರಷ್ಟಾಚಾರವನ್ನು ಖಂಡಿಸಿ ಸೆಪ್ಟಂಬರ್ 20ರಂದು ಪ್ರತಿಭಟನೆ ಮೂಲಕ ಬಿಜೆಪಿ ಕರ್ಮಕಾಂಡವನ್ನು ಬಯಲಿಗೆಳೆಯುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದರು.

ಈ ಸರ್ಕಾರದ ಜನ ವಿರೋಧಿ ನೀತಿ ವಿರುದ್ಧ ಕಾಂಗ್ರೆಸ್‌ ಹೋರಾಡುತ್ತೆ- ಸಲೀಂ ಅಹ್ಮದ್

ಬಿಜೆಪಿಯ ಆಂತರಿಕ ಒಳ ಜಗಳ ಹಾಗೂ ಮಂತ್ರಿಗಳ ನಡುವಿನ ಸಂವಹನದ ಕೊರತೆಯಿಂದ ಸಮಸ್ಯೆಗಳು ಉಲ್ಬಣಗೊಂಡಿವೆ. ಬಿಜೆಪಿಯ ಭ್ರಷ್ಟಾಚಾರವನ್ನು ಸದನದಲ್ಲಿ ಎಳೆ ಎಳೆಯಾಗಿ ಬಿಚ್ಚಿಡಲಿದ್ದೇವೆ. ರಾಜ್ಯದ ಜನತಗೆ ಇದರ ಬಗ್ಗೆ ಅರಿವು ಮೂಡಿಸುತ್ತೇವೆ. ಸುಮಾರು 2 ಸಾವಿರ ಕೋಟಿಯಷ್ಟು ಹಗರಣ ನಡೆದಿದೆ. ಈವರೆಗೂ ಯಾವುದೇ ಲೆಕ್ಕ ಕೂಡಾ ನೀಡಿಲ್ಲ ಎಂದು ಕಾಂಗ್ರೆಸ್​ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ದೂರಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಡಿಜೆ ಹಳ್ಳಿ ಪ್ರಕರಣ ಹಾಗೂ ಡ್ರಗ್ಸ್ ಪ್ರಕರಣ ನಿಭಾಯಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಈ ಪ್ರಕರಣಗಳ ಕುರಿತು ಸಚಿವ ಸಿ ಟಿ ರವಿ ಸಾಕಷ್ಟು ಒತ್ತಡ ಇದೆ ಎಂದು ಬೊಬ್ಬೆ ಹಾಕುತ್ತಿದ್ದಾರೆ. ಯಾರಿಂದ ಒತ್ತಡ ಇದೆ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಸಚಿವರ ವಿರುದ್ಧ ಕುಡುಕಿದರು.

ನಟಿ ರಾಗಿಣಿ ಅಥವಾ ಅವರದೇ ಪಕ್ಷದ ಶಾಸಕರ, ಸಚಿವರ ಒತ್ತಡ ಇದೆಯೋ ಎಂದು ಸಿ ಟಿ ರವಿ ಬಹಿರಂಗಗೊಳಿಸಲಿ. ನಾವು ಸರ್ಕಾರದ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ ಬಳಿಕ ದಾರಿತಪ್ಪಿಸುವ ಕೆಲಸವನ್ನು ರಾಜ್ಯ ಸರ್ಕರ ಮಾಡುತ್ತಿದೆ.‌ ಆದರೆ, ಯಾರೇ ತಪ್ಪು ಮಾಡಿದ್ದರೂ ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯಲಿ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿ ಎಂದರು.

ಉತ್ತಮ‌ ತನಿಖಾ ತಂಡವನ್ನು ರಚಿಸಿ, ಎರಡೂ ಪ್ರಕರಣಗಳ ಬಗ್ಗೆ ಸರ್ಕಾರ ತನಿಖೆ ಕೈಗೆತ್ತಿಕೊಳ್ಳಲಿ. ಆದರೆ, ಆಪಾದನೆಗಳ ಮೂಲಕ ಜನರನ್ನ ದಾರಿತಪ್ಪಿಸುವ ಕೆಲಸ ಮಾಡೋದು ಬೇಡ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಸೆ.21ರಿಂದ ಕಲಾಪ ಆರಂಭ :ಕೊರೊನಾ ಭ್ರಷ್ಟಾಚಾರ, ಡಿಜೆ ಹಳ್ಳಿ ಪ್ರಕರಣ, ಡ್ರಗ್ಸ್​ ಪ್ರಕರಣ ಹಾಗೂ ರೈತರಿಗೆ ಮಾರಕವಾದ ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆಗಳ ಕುರಿತು ಸೆಪ್ಟಂಬರ್​ 21ರಿಂದ ನಡೆಯಲಿರುವ ಕಲಾಪದಲ್ಲಿ ಪ್ರಶ್ನೆ ಹಾಕುತ್ತೇವೆ.

ರಾಜ್ಯದ 25 ಸಂಸದರು ಇಲ್ಲಿನ ಸಮಸ್ಯೆಗಳ ಬಗ್ಗೆ ಕೇಂದ್ರದ ಬಳಿ ಏನನ್ನು ಮಾತನಾಡುತ್ತಿಲ್ಲ.‌ ಇಲ್ಲಿ ಹುಲಿಯಂತಿರುವ ಇವರೆಲ್ಲ, ಅಲ್ಲಿ ಹೋದ ಮೇಲೆ ಬೆಕ್ಕಿನಂತಾಗುತ್ತಾರೆ.‌ ರಾಜ್ಯಕ್ಕೆ ಎಸಗುತ್ತಿರುವ ಅನ್ಯಾಯದ ಬಗ್ಗೆ ಸಂಸದರು ಪ್ರಧಾನಿಯವರನ್ನು ಪ್ರಶ್ನಿಸದೇ ಇರುವುದು ದುರಂತವೇ ಸರಿ ಎಂದು ಸಲೀಂ ಅಹ್ಮದ್ ಸಂಸದರ ವಿರುದ್ಧ ಕಿಡಿಕಾರಿದರು.

ಆರೋಗ್ಯ ಹಸ್ತ ಕಾರ್ಯಕ್ರಮ: ಕಾಂಗ್ರೆಸ್ ವತಿಯಿಂದ ಈಗಾಗಲೇ 150 ಕ್ಷೇತ್ರಗಳಲ್ಲಿ ಆರೋಗ್ಯ ಹಸ್ತ ಕಾರ್ಯಕ್ರಮ ಕೈಗೆತ್ತಿಕೊಳ್ಳಲಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಎಲ್ಲಾ ಗ್ರಾಮ ಪಂಚಾಯತ್‌, ಬ್ಲಾಕ್​ಗಳಲ್ಲಿ ಮನೆ, ಮನೆಗೆ ತೆರಳಿ ಜನರನ್ನು ತಪಾಸಣೆ ನಡೆಸಿ, ಸೋಂಕಿನ ಲಕ್ಷಣಗಳಿವೆಯೇ ಎಂದು ಪತ್ತೆ ಹಚ್ಚುತ್ತಿದ್ದಾರೆ.‌ ಆರೋಗ್ಯ ಸಮಸ್ಯೆಗಳು ಕಂಡು ಬಂದವರನ್ನು ತಕ್ಷಣ ಆರೋಗ್ಯ ಇಲಾಖೆಯನ್ನು ಭೇಟಿಯಾಗಲು ಸೂಚನೆ ನೀಡುತ್ತಿದ್ದಾರೆ ಎಂದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಆರೋಗ್ಯ ಹಸ್ತ ತಂಡಗಳು ಮನೆ, ಮನೆಗೆ ಭೇಟಿ ನೀಡುತ್ತಿವೆ. ಜನರಿಂದಲೂ ಉತ್ತಮ ಸ್ಪಂದನೆ ದೊರಕುತ್ತಿದೆ. ಸೋಂಕು ಕಾಣಿಸಿಕೊಂಡ 6 ತಿಂಗಳಿನಿಂದ ಕಾಂಗ್ರೆಸ್ ಜನರ ಪರ ಹೋರಾಟ ಮಾಡುತ್ತಿದೆ ಎಂದರು.

ಮುಂಬರುವ ಗ್ರಾಮ ಪಂಚಾಯತ್‌ ಚುನಾವಣೆ ಹಿನ್ನೆಲೆ ಸುಮಾರು 4 ಗಂಟೆಗಳ ಕಾಲ ಜಿಲ್ಲಾ ಕಾರ್ಯಕಾರಿ ಸಮಿತಿಯ ಸಭೆ ನಡೆಯಿತು. ‌ಎಲ್ಲಾ ಹಿರಿಯ ನಾಯಕರು, ಚುನಾಯಿತ ಜನಪ್ರತಿನಿಧಿಗಳು, ಕಾರ್ಯಕರ್ತರು ಈ ಸಭೆಯಲ್ಲಿ ಭಾಗವಹಿಸಿ, ಸಲಹೆ ಸೂಚನೆಗಳನ್ನು ನೀಡಿದರು.

ವಿಶೇಷವಾಗಿ ಪಕ್ಷದ ಸಂಘಟನೆಯನ್ನು ಬ್ಲಾಕ್ ಹಾಗೂ ಬೂತ್ ಮಟ್ಟದಲ್ಲಿ ಮಾಡುತ್ತಿದ್ದೇವೆ. 1,916 ಬೂತ್​ಗಳಲ್ಲಿ ‌ಸಕ್ರಿಯವಾಗಿ ಬೂತ್ ಕಮಿಟಿಗಳನ್ನು ಗಟ್ಟಿ ಮಾಡಿ, ಚುನಾವಣೆಗೆ ತಯಾರಾಗಿದ್ದೇವೆ‌. ಕಾಂಗ್ರೆಸ್ ಗ್ರಾಪಂ ಚುನಾವಣೆಗೆ ಸಜ್ಜಾಗಿದ್ದು ಜಿಲ್ಲೆಯಲ್ಲಿ ಹೆಚ್ಚಿನ ಸೀಟ್​ಗಳನ್ನು ಗೆಲ್ಲುವ ವಿಶ್ವಾಸವನ್ನು ಸಲೀಂ ಅಹ್ಮದ್ ಅವರು ವ್ಯಕ್ತಪಡಿಸಿದರು.

ABOUT THE AUTHOR

...view details