ಮಂಗಳೂರು:ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಡೆಂಗ್ಯು, ಮಲೇರಿಯಾ ಕಾಯಿಲೆಗಳಿಂದ ಸಾಕಷ್ಟು ಮಂದಿ ಸಂಕಷ್ಟಕ್ಕೊಳಗಾಗಿದರು. ಈ ಮಾರಣಾಂತಿಕ ಕಾಯಿಲೆಗೆ ತುತ್ತಾಗಿ ಹಲವರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಈ ಮಾರಕ ರೋಗಗಳನ್ನು ಮನೆಮನೆಗೆ ತಲುಪಿಸಿದ್ದೆ ಕಾಂಗ್ರೆಸ್ ಸಾಧನೆ ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಟೀಕಿಸಿದ್ದಾರೆ.
ಮಂಗಳೂರಿನಲ್ಲಿ ಡೆಂಗ್ಯು, ಮಲೇರಿಯಾ ಮನೆ ಮನೆ ತಲುಪಿಸಿದ್ದೇ ಕಾಂಗ್ರೆಸ್ ಸಾಧನೆ: ಶಾಸಕ ಭರತ್ ಶೆಟ್ಟಿ
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಡೆಂಗ್ಯು, ಮಲೇರಿಯಾ ಕಾಯಿಲೆಗಳನ್ನು ಮನೆ ಮನೆಗೆ ತಲುಪಿಸಿದ್ದೆ ಕಾಂಗ್ರೆಸ್ ಪಕ್ಷದ ಸಾಧನೆ ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಟೀಕಿಸಿದ್ರು.
ಮಂಗಳೂರಿನಲ್ಲಿ ಡೆಂಗ್ಯು ಮಲೇರಿಯಾ ಮನೆ ಮನೆ ತಲುಪಿಸಿದ್ದೇ ಕಾಂಗ್ರೆಸ್ ಸಾಧನೆ: ಶಾಸಕ ಭರತ್ ಶೆಟ್ಟಿ
ದ.ಕ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮಲೇರಿಯಾ ನಿಯಂತ್ರಣಕ್ಕಾಗಿ ರಚಿಸಿದ್ದ 60 ಮಂದಿಯನ್ನೊಳಗೊಂಡ ಮಲೇರಿಯಾ ಸೆಲ್ನ ಸಿಬ್ಬಂದಿಗೆ ಸರಿಯಾಗಿ ಸಂಬಳ ಕೊಡಲಿಲ್ಲ. ಅವರನ್ನು ಅಂದಿನ ಆಡಳಿತ ಸರ್ಕಾರ ನೀರಿನ ಬಿಲ್ ಕೊಡುವ ಮೀಟರ್ ರೀಡಿಂಗ್ ಕೆಲಸಕ್ಕೆ ನೇಮಿಸಿತು. ಇದರಿಂದ ನಗರದ ವಾರ್ಡ್ಗಳಲ್ಲಿರುವ ಮನೆ ಮನೆಗೆ ತೆರಳಿ ಡೆಂಗ್ಯು, ಮಲೇರಿಯಾ ಹರಡದಂತೆ ಎಚ್ಚರವಹಿಸಲು ಹಾಗು ರೋಗಗಳನ್ನು ನಿಯಂತ್ರಿಸುವಲ್ಲಿ ಸಲಹೆ ನೀಡಬೇಕಾದವರು ಸಿಗದೆ ಜನರು ಸಂಕಷ್ಟಕ್ಕೊಳಗಾದರು ಎಂದು ಶೆಟ್ಟಿ ಆರೋಪಿಸಿದರು.