ಮಂಗಳೂರು: ಇಲ್ಲಿನ ಸೀಲ್ ಡೌನ್ ಪ್ರದೇಶಕ್ಕೆ ಭೇಟಿ ನೀಡಿದ ಮಂಗಳೂರು ಶಾಸಕ ವೇದವ್ಯಾಸ ಕಾಮತ್ ಹೋಂ ಕ್ವಾರಂಟೈನ್ ಆಗಬೇಕು ಎಂದು ಕಾಂಗ್ರೆಸ್ ಮುಖಂಡ ಪಿ.ವಿ.ಮೋಹನ್ ಆಗ್ರಹಿಸಿದ್ದಾರೆ.
ಸೀಲ್ ಡೌನ್ ಪ್ರದೇಶಕ್ಕೆ ಭೇಟಿ: ಶಾಸಕ ವೇದವ್ಯಾಸ ಕಾಮತ್ ಹೋಂ ಕ್ವಾರಂಟೈನ್ ಆಗಲು ಆಗ್ರಹ - ಕೊರೊನಾ ವೈರಸ್
ನಿನ್ನೆ ಮಂಗಳೂರಿನ ಸೀಲ್ ಡೌನ್ ಪ್ರದೇಶಕ್ಕೆ ತಮ್ಮ ತಂಡದೊಂದಿಗೆ ಭೇಟಿ ನೀಡಿದ್ದ ಶಾಸಕ ವೇದವ್ಯಾಸ ಕಾಮತ್ ಹೋಂ ಕ್ವಾರಂಟೈನ್ ಆಗಬೇಕೆಂದು ಕಾಂಗ್ರೆಸ್ ಮುಖಂಡ ಪಿ.ವಿ.ಮೋಹನ್ ಆಗ್ರಹಿಸಿದ್ದಾರೆ.
ನಿನ್ನೆ ಮಂಗಳೂರಿನ ಸೀಲ್ ಡೌನ್ ಪ್ರದೇಶಕ್ಕೆ ಶಾಸಕರು ತಮ್ಮ ತಂಡದೊಂದಿಗೆ ಭೇಟಿ ನೀಡಿದ್ದಾರೆ. ಈ ಮೂಲಕ ಅವರದೇ ಸರ್ಕಾರ ಸೂಚಿಸಿರುವ ನಿಯಮಾವಳಿ ಉಲ್ಲಂಘಿಸಿದ್ದಾರೆ. ಶಾಸಕ ವೇದವ್ಯಾಸ ಕಾಮತ್ ಅವರು ಸ್ವಯಂಪ್ರೇರಿತರಾಗಿ ಹೋಂ ಕ್ವಾರಂಟೈನ್ ಆಗಬೇಕು. ಆ ಮೂಲಕ ಅವರು ಮಾದರಿಯಾಗಬೇಕು. ಇಲ್ಲವಾದಲ್ಲಿ ಜಿಲ್ಲಾಡಳಿತ ಅವರ ಹೋಂ ಕ್ವಾರಂಟೈನ್ಗೆ ಆದೇಶಿಸಬೇಕು. ಅವರ ಜೊತೆಗಿದ್ದವರನ್ನೂ ಹೋಂ ಕ್ವಾರಂಟೈನ್ಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಕೊರೊನಾ ವೈರಸ್ ಸೋಂಕಿತನ ಮನೆ ಹಾಗೂ ಸುತ್ತಲಿನ ಪ್ರದೇಶವನ್ನು ಕಂಟೈನ್ಮೆಂಟ್ ಪ್ರದೇಶವಾಗಿ ಗುರುತಿಸಲಾಗುತ್ತದೆ. ಸೀಲ್ ಡೌನ್ ಮಾಡಲಾಗಿರುವ ಆ ಪ್ರದೇಶಕ್ಕೆ ಪ್ರವೇಶ ನಿಷೇಧಿಸಲಾಗಿದ್ದರೂ ಶಾಸಕರಿಗೆ ಅಲ್ಲಿಗೆ ಹೋಗುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ದಾರೆ.