ಮಂಗಳೂರು: ದ.ಕ.ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಮೂಲ ಪತ್ತೆ ಹಚ್ಚಲು ಉನ್ನತ ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆಯಾಗಲಿ ಎಂದು ಕಾಂಗ್ರೆಸ್ ಮುಖಂಡ ಪಿ.ವಿ.ಮೋಹನ್ ಆಗ್ರಹಿಸಿದರು.
ಮಂಗಳೂರಿನಲ್ಲಿ ಮಾತನಾಡಿದ ಅವರು, ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಕೊರೊನಾ ಕಾಣಿಸಿಕೊಂಡ ಬಗ್ಗೆ ಆರೋಗ್ಯಾಧಿಕಾರಿಗಳಿಂದ ತನಿಖೆ ನಡೆಸಿದ್ದಾರೆ. ಇದು ಪತ್ತೆದಾರಿ ಕೆಲಸ. ಇದನ್ನು ಆರೋಗ್ಯಾಧಿಕಾರಿಗಳು ತನಿಖೆ ಮಾಡಲು ಸಾಧ್ಯವಿಲ್ಲ. ಈಗಾಗಲೇ ಆರೋಗ್ಯಾಧಿಕಾರಿಗಳು ನೀಡಿರುವ ಮಧ್ಯಂತರ ವರದಿಯನ್ನು ಬಹಿರಂಗಪಡಿಸಲಿ. ಯಾವ ರೀತಿ ತನಿಖೆಯಾಗಿದೆ ಎಂದು ಜನರಿಗೆ ತಿಳಿಯಲಿ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಪಿ.ವಿ.ಮೋಹನ್ ಹೇಳಿಕೆ ಸರ್ಕಾರಕ್ಕೆ ಇಷ್ಟು ದಿನವಾದರೂ ಸೋಂಕಿನ ನೈಜ ಮೂಲ ಹುಡುಕಲು ಸಾಧ್ಯವಾಗಿಲ್ಲ. ಸಮಯವಕಾಶ ಕೇಳಿ ಪ್ರಕರಣ ಮುಚ್ಚುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ. ಬಂಟ್ವಾಳ, ನಂಜನಗೂಡು ಸೋಂಕಿಗೆ ಬಿಜೆಪಿ ನಂಟಿದೆ. ನಂಜನಗೂಡು ರೀತಿಯಲ್ಲಿ ಬಂಟ್ವಾಳ ಸೋಂಕಿನ ತನಿಖೆಯಾಗಲಿ. ಇದನ್ನು ಕೊರೊನಾ ಕೇಸರಿ ಎಂದರೆ ತಪ್ಪಾಗಲಾರದು ಎಂದರು.
ಸರ್ಕಾರ ಸೋಂಕಿನ ನೈಜಮೂಲ ಹೊರಗೆಡಹಲು ಸಮಯಾವಕಾಶ ಕೇಳಿ, ನೈಜಾಂಶ ಮರೆಮಾಚಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.
ಮಹಾರಾಷ್ಟ್ರದಲ್ಲಿ ಸಿಲುಕಿರುವ ಕನ್ನಡಿಗರನ್ನು ಕರೆತರುವ ಗಂಭೀರ ಪ್ರಯತ್ನವನ್ನು ಮಾಡಲಾಗುತ್ತಿಲ್ಲ. ಈ ನಿಟ್ಟಿನಲ್ಲಿ ದ.ಕ. ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್, ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ತಮ್ಮ ಪ್ರಭಾವವಿದ್ದರೂ ಮೌನವಾಗಿದ್ದಾರೆ ಎಂದು ಟೀಕಿಸಿದರು.