ಕರ್ನಾಟಕ

karnataka

ETV Bharat / state

ಕಾಂಗ್ರೆಸ್ ಪಕ್ಷ ಗಾಂಧಿ-ಅಂಬೇಡ್ಕರ್ ಕನಸಿಗೆ ಬೆಂಕಿ ಇಟ್ಟಿದೆ : ನಳೀನ್ ಕುಮಾರ್ - ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್

ಪೌರತ್ವ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಬಿಜೆಪಿ ಗಾಂಧಿಯವರ ಕನಸನ್ನು ನನಸು ಮಾಡಿದೆ. ಆದರೆ ಪೌರತ್ವ ಕಾಯ್ದೆಯನ್ನು ವಿರೋಧಿಸುವ ಮೂಲಕ ಕಾಂಗ್ರೆಸ್ ಪಕ್ಷ,  ಗಾಂಧಿ, ಅಂಬೇಡ್ಕರ್ ಕನಸಿಗೆ ಬೆಂಕಿ ಇಟ್ಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಆರೋಪಿಸಿದ್ದಾರೆ.

nalin kumar kateel
ನಳೀನ್ ಕುಮಾರ್ ಕಟೀಲ್​​

By

Published : Jan 28, 2020, 4:07 AM IST

Updated : Jan 28, 2020, 5:19 AM IST

ಮಂಗಳೂರು:ಪೌರತ್ವ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಬಿಜೆಪಿ ಗಾಂಧಿಯವರ ಕನಸನ್ನು ನನಸು ಮಾಡಿದೆ. ಆದರೆ ಪೌರತ್ವ ಕಾಯ್ದೆಯನ್ನು ವಿರೋಧಿಸುವ ಮೂಲಕ ಕಾಂಗ್ರೆಸ್ ಪಕ್ಷ, ಗಾಂಧಿ, ಅಂಬೇಡ್ಕರ್ ಕನಸಿಗೆ ಬೆಂಕಿ ಇಟ್ಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಆರೋಪಿಸಿದ್ದಾರೆ.

ನಗರದ ಬಂಗ್ರ ಕೂಳೂರಿನ ಗೋಲ್ಡ್ ಪಿಂಚ್ ಮೈದಾನದಲ್ಲಿ ಬಿಜೆಪಿ ವತಿಯಿಂದ ನಡೆದ ಸಿಎಎ ಬಗ್ಗೆ ಜನಜಾಗೃತಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ದೇಶವನ್ನು ವಿಭಜನೆ ಮಾಡಿರುವುದರಿಂದ ನಾವು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸುತ್ತಿದ್ದೇವೆ. ದೇಶ ವಿಭಜನೆಯಾದ ಸಂದರ್ಭ ಪಾಕಿಸ್ತಾನದಿಂದ ಭಾರತಕ್ಕೆ ಬಂದವರಿಗೆ ಗಾಂಧಿಯವರು ಪೌರತ್ವ ನೀಡಬೇಕೆಂದು ಹೇಳಿದ್ದರು. ಆದರೆ ಕಾಂಗ್ರೆಸಿಗರು ಗಾಂಧಿಯ ಮಾತಿಗೆ ಬೆಲೆ ಕೊಡಲಿಲ್ಲ‌.ಆದ್ರೀಗ ನರೇಂದ್ರ ಮೋದಿಯವರು ಗಾಂಧೀಜಿಯವರ ಮಾತಿಗೆ ಬೆಲೆ ಕೊಟ್ಟು ಅವರ ಕನಸನ್ನು ನನಸು ಮಾಡಿದರು ಎಂದರು.

ನಳೀನ್ ಕುಮಾರ್ ಕಟೀಲ್​​
ಪೌರತ್ವ ಕಾಯ್ದೆಯನ್ನು ಬಳಸಿ ಮಂಗಳೂರಿನಲ್ಲಿ ಬೆಂಕಿ ಹಾಕುವ ಕೆಲಸ ಮಾಡಲಾಗುತ್ತಿದೆ. ಹೋರಾಟದ ಹೆಸರಿನಲ್ಲಿ ಕಲ್ಲು ತೂರಾಟ ನಡೆಯಿತು. ಈ ಸಂದರ್ಭ ಕಾಂಗ್ರೆಸ್ ಹಾಗೂ ಜನತಾದಳದ ನಾಯಕರು ರಾಜಕಾರಣ ನಡೆಸಲು ಹೋಗಿದ್ದಾರೆ. ಕುಮಾರಸ್ವಾಮಿ, ಸಿದ್ದರಾಮಯ್ಯ ಮಂಗಳೂರು ಘಟನೆ ಬಗ್ಗೆ ಹೀನಾಯವಾಗಿ ಮಾತನಾಡಿದ್ದಾರೆ. ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಇವರ ಕೃತ್ಯದಿಂದ ಪೊಲೀಸರ ನೈತಿಕ ಸ್ಥೈರ್ಯ ಕುಸಿದಿದೆ. ಇಬ್ಬರ ಹೇಳಿಕೆಗಳು ದೇಶ ವಿರೋಧಿ ಹೇಳಿಕೆಯಾಗಿದೆ. ಆದ್ದರಿಂದ ನಾವು ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಸಮಾರಂಭ ಮಾಡಿದ್ದೇವೆ ಎಂದರು.
Last Updated : Jan 28, 2020, 5:19 AM IST

ABOUT THE AUTHOR

...view details