ಕರ್ನಾಟಕ

karnataka

ETV Bharat / state

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್​ಗೆ ಅದ್ಧೂರಿ ಅಭಿನಂದನಾ ಕಾರ್ಯಕ್ರಮ - Congratulations program to BJP President Nalin Kumar at Mangalore

ರಾಜ್ಯ ಬಿಜೆಪಿ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲು ಅವರಿಗೆ ಶುಕ್ರವಾರ ಸಂಜೆ ನಗರದ ಕೊಡಿಯಾಲ್ ಬೈಲ್ ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಅಭಿನಂದನಾ ಕಾರ್ಯಕ್ರಮ ನೆರವೇರಿತು.

Nalin Kumar
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್​ಗೆ ಅಭಿನಂದನಾ ಕಾರ್ಯಕ್ರಮ

By

Published : Dec 14, 2019, 2:01 AM IST

ಮಂಗಳೂರು:ರಾಜ್ಯ ಬಿಜೆಪಿ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲು ಅವರಿಗೆ ಶುಕ್ರವಾರ ಸಂಜೆ ನಗರದ ಕೊಡಿಯಾಲ್ ಬೈಲ್ ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಅಭಿನಂದನಾ ಕಾರ್ಯಕ್ರಮ ನೆರವೇರಿತು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್​ಗೆ ಅಭಿನಂದನಾ ಕಾರ್ಯಕ್ರಮ

ಮಂಗಳೂರಿನ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತೆರೆದ ವಾಹನ ಮೂಲಕ ಅವರನ್ನು ಬಿಜೆಪಿ ಕಚೇರಿಗೆ ಕರೆತರಲಾಯಿತು.

ಈ ಸಂದರ್ಭ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಮಾತನಾಡಿ, ಬಹಳಷ್ಟು ಬಾರಿ ದಿಲ್ಲಿಗೆ ಅಧಿವೇಶನಕ್ಕೆ ಹೋಗಿದ್ದೇನೆ ಆದರೆ ಬಹಳ ಆನಂದದಿಂದ ತಿರುಗಿ ಬಂದ ದಿನ ಇವತ್ತಿನ‌ದಾಗಿದೆ. ಯಡಿಯೂರಪ್ಪ ನೇತೃತ್ವದ ಸುಭದ್ರ ಸರ್ಕಾರ ಮೂರುವರೆ ವರ್ಷ ಪೂರೈಸಬೇಕೆಂದು ನಾವು ಕನಸು ಕಂಡಿದ್ದೆವು, ಅದು ಈಡೇರಿದೆ. ಆ ವಿಜಯವನ್ನು ಹಿಡಿದುಕೊಂಡು ನಾನು ದ.ಕ.ಜಿಲ್ಲೆಗೆ ಬಂದಿದ್ದೇನೆ ಎಂದರು.

ಈ ದೇಶದಲ್ಲಿದ್ದ ಪೌರತ್ವದ ನೀತಿಯನ್ನು ತಿದ್ದುಪಡಿ ಮಾಡಿ ಈ ದೇಶದ ಎಲ್ಲಾ ಹಿಂದೂಗಳಿಗೆ ನ್ಯಾಯ ದೊರಕಿಸಿಕೊಡುವಂತಹ ಮಸೂದೆಯನ್ನು ಅನುಮೋದನೆ ಮಾಡಿದ್ದೇವೆ ಎಂದು ಇದೇ ವೇಳೆ ಹೇಳಿದರು.

ನಾನು ರಾಜ್ಯಾಧ್ಯಕ್ಷನಾದ ಬಳಿಕ ಮೂರು ಸವಾಲುಗಳು ಎದುರಾದವು. ರಾಜ್ಯದ ರಾಜಧಾನಿಯ ಮೇಯರ್ ಆಯ್ಕೆ ಚುನಾವಣೆ ಬಂತು. ಬಹುಮತ ನಮಗಿದ್ದರೂ ನಾಲ್ಕು ಅವಧಿಯಲ್ಲಿ ಮೇಯರ್ ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ಮುಖ್ಯಮಂತ್ರಿ ಈ ಜವಬ್ದಾರಿ ನನಗೆ ನೀಡಿದ್ದರು. ಮೊದಲ ಪರೀಕ್ಷೆಯಲ್ಲಿ ನಾನು ಗೆದ್ದೆ‌. ಮೇಯರ್ ಆಯ್ಕೆಯಲ್ಲಿ ನಮಗೆ ಬಹುಮತ ಬಂತು. ಎರಡನೇ ಸವಾಲು ನಗರ ಪಂಚಾಯತ್, ಪಟ್ಟಣ ಪಂಚಾಯತ್, ಮನಪಾ ಚುನಾವಣೆಯಲ್ಲಿಯೂ ಮಂಗಳೂರಿನ ಜನತೆ ಲೋಕಸಭಾ, ರಾಜ್ಯಸಭಾ ಚುನಾವಣೆಯಲ್ಲಿ ಯಾವ ರೀತಿ ಆಶೀರ್ವಾದ ಮಾಡಿದ್ದರೋ ಅದೇ ರೀತಿ ಮನಪಾಚುನಾವಣೆಯಲ್ಲಿಯೂ ಆಶೀರ್ವಾದ ಮಾಡಿ ಗೆಲ್ಲಿಸಿದ್ದಾರೆ. 44 ಸ್ಥಾನಗಳನ್ನು ಗೆಲ್ಲುವ ಮೂಲಕ ಮಂಗಳೂರು ಮನಪಾ ಆಡಳಿತ ಬಿಜೆಪಿಗೆ ನೀಡಿದ್ದಾರೆ.

ಇನ್ನು ಮೂರನೇ ಸವಾಲು ಉಪಚುನಾವಣೆ. ಯಡಿಯೂರಪ್ಪನವರ ನೇತೃತ್ವದಲ್ಲಿ ಇಡೀ ರಾಜ್ಯದಲ್ಲಿ ನಾವು ಸಂಘಟನೆಗೊಂಡಿದ್ದೆವು. ಯಡಿಯೂರಪ್ಪರ ಪ್ರಯತ್ನಕ್ಕೆ ಫಲ ದೊರಕಿತು. 15ರಲ್ಲಿ 12 ಸ್ಥಾನವನ್ನು ಗೆದ್ದೆವು‌. ಈ ಎಲ್ಲಾ ಸ್ಥಾನಗಳು ಕಾಂಗ್ರೆಸ್ ಹಾಗೂ ಜನತಾ ದಳದವುಗಳು. ಇದು ಬಿಜೆಪಿಯ ಸಾಧನೆ ಎಂದು ನಳಿನ್ ಕುಮಾರ್ ಕಟೀಲು ಹೇಳಿದರು.

ABOUT THE AUTHOR

...view details