ಮಂಗಳೂರು:ಕಟೀಲು ಯಕ್ಷಗಾನ ಮೇಳದಲ್ಲಿ ಹಾಲಿ ಪರಿಸ್ಥಿತಿ ಹಾಗೂ ವಿವಾದ ಉಂಟಾದ ದಿನ ಮೇಳ ಹೊರಡುವಾಗ ನಡೆದ ಘಟನೆಗಳ ಬಗ್ಗೆ ರಾಜ್ಯ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ.
ಕಟೀಲು ಯಕ್ಷಗಾನ ಮೇಳದಲ್ಲಿ ಗೊಂದಲ: ಸಮಗ್ರ ವರದಿ ಒಪ್ಪಿಸಲು ಉಸ್ತುವಾರಿ ಸಚಿವರ ಸೂಚನೆ - Confusion at Ketel Yakshagana Fair latest news
ಕಟೀಲು ಯಕ್ಷಗಾನ ಮೇಳದಲ್ಲಿ ವಿವಾದ ಉಂಟಾಗಿದ್ದು, ಅದರ ಬಗ್ಗೆ ಸಮಗ್ರ ವರದಿಯನ್ನು ಸರ್ಕಾರಕ್ಕೆ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ.
ಕಟೀಲು ಯಕ್ಷಗಾನ ಮೇಳ
ಶುಕ್ರವಾರ ರಾತ್ರಿ ಕಟೀಲಿನಲ್ಲಿ ಆರು ಮೇಳಗಳ ಆರಂಭದ ಸೇವೆಯಾಟ ನಡೆದಿದ್ದ ಸಂದರ್ಭ ಮೇಳದ ಸಂಚಾಲಕರು ಖ್ಯಾತ ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿಯವರಿಗೆ ಭಾಗವತಿಕೆ ನಡೆಸಲು ನಿರಾಕರಿಸಿ, ಮೇಳದಿಂದಲೇ ನಿರ್ಗಮಿಸಲು ಪರೋಕ್ಷವಾಗಿ ಸೂಚನೆ ನೀಡಿದ್ದರು ಎನ್ನಲಾಗ್ತಿದೆ. ಇದು ಯಕ್ಷಗಾನ ಕ್ಷೇತ್ರದಲ್ಲಿ ಬಹಳಷ್ಟು ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೆ ಮೇಳದ ಬಗ್ಗೆ ಈಗಾಗಲೇ ಹಲವಾರು ಗೊಂದಲಗಳಿದ್ದು, ಈ ಎಲ್ಲದರ ಬಗ್ಗೆ ಸಮಗ್ರ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸುವಂತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ.