ಕರ್ನಾಟಕ

karnataka

ETV Bharat / state

ಮಂಗಳೂರಿನ ದೈವಸ್ಥಾನದ ಕಾಣಿಕೆ ಹುಂಡಿಯಲ್ಲಿ ಮತ್ತೆ ಕಾಂಡೋಮ್ ಪತ್ತೆ - ಮಂಗಳೂರು ಇತ್ತೀಚಿನ ಸುದ್ದಿ

ಉರ್ವದ ದಡ್ಡಲ್ ಕಾಡ್ ಬಬ್ಬುಸ್ವಾಮಿ ದೈವಸ್ಥಾನದ ಕಾಣಿಕೆ ಹುಂಡಿಯಲ್ಲಿ ಅವಹೇಳನಕಾರಿ ಬರಹ ಮತ್ತು ಕಾಂಡೋಮ್ ಪತ್ತೆಯಾಗಿದೆ. ಘಟನೆ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿರುವ ದೈವಸ್ಥಾನದ ಆಡಳಿತ ಮಂಡಳಿ ಮತ್ತು ಹಿಂದೂ ಸಂಘಟನೆಗಳು ಅಪಚಾರವೆಸಗಿದವರಿಗೆ ಶಿಕ್ಷೆ ನೀಡುವಂತೆ ದೈವಸ್ಥಾನದ ಎದುರು ದೈವಕ್ಕೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ.

Mangalore temple treasure box
ಮಂಗಳೂರಿನ ದೈವಸ್ಥಾನದ ಕಾಣಿಕೆ ಹುಂಡಿ

By

Published : Feb 25, 2021, 12:20 PM IST

ಮಂಗಳೂರು:ಮಂಗಳೂರಿನಲ್ಲಿ ದೈವಸ್ಥಾನಗಳ ಕಾಣಿಕೆ ಡಬ್ಬಿಯಲ್ಲಿ ಕಾಂಡೋಮ್ ಮತ್ತು ಅವಹೇಳನ ಬರಹ ಹಾಕಿ ಅವಹೇಳನ ಮಾಡುವ ಕುಕೃತ್ಯಗಳು ಮುಂದುವರೆದಿದ್ದು ಇಂದು ಮತ್ತೊಂದು ಪ್ರಕರಣ ವರದಿಯಾಗಿದೆ.

ಉರ್ವದ ದಡ್ಡಲ್ ಕಾಡ್ ಬಬ್ಬುಸ್ವಾಮಿ ದೈವಸ್ಥಾನದ ಕಾಣಿಕೆ ಹುಂಡಿಯನ್ನು ಇಂದು ತೆರೆದ ಸಂದರ್ಭದಲ್ಲಿ ಅದರಲ್ಲಿ ಅವಹೇಳನಕಾರಿ ಬರಹ ಮತ್ತು ಕಾಂಡೋಮ್ ಪತ್ತೆಯಾಗಿದೆ. ಕಾಣಿಕೆ ಡಬ್ಬಿಯಲ್ಲಿ ಅವಹೇಳನಕಾರಿ ಬರಹ ಮತ್ತು ಕಾಂಡೋಮ್ ಗಳನ್ನು ಕಾಣಿಕೆ ಹುಂಡಿಯಲ್ಲಿ ಹಾಕಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಉರ್ವ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಪರಿಶೀಲನೆ ನಡೆಸಿದ್ದಾರೆ.

ಮಂಗಳೂರಿನ ವಿವಿಧ ಕಾಣಿಕೆ ಡಬ್ಬಿಗಳಲ್ಲಿ ಕಾಂಡೋಮ್ ಮತ್ತು ಅವಹೇಳನಕಾರಿ ಬರಹ ಬರೆದು ಅಪಮಾನಿಸುವ ಘಟನೆಗಳು ಇತ್ತೀಚೆಗೆ ನಡೆದಿದ್ದು, ಈ ಪ್ರಕರಣದಲ್ಲಿ ಆರೋಪಿಗಳ ಬಂಧನವಾಗಿರಲಿಲ್ಲ. ಘಟನೆ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿರುವ ದೈವಸ್ಥಾನದ ಆಡಳಿತ ಮಂಡಳಿ ಮತ್ತು ಹಿಂದೂ ಸಂಘಟನೆಗಳು ಅಪಚಾರವೆಸಗಿದವರಿಗೆ ಶಿಕ್ಷೆ ನೀಡುವಂತೆ ದೈವಸ್ಥಾನದೆದುರು ದೈವಕ್ಕೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ABOUT THE AUTHOR

...view details