ಕರ್ನಾಟಕ

karnataka

ETV Bharat / state

ಸಾರ್ವಜನಿಕರ ಉಪಯೋಗಕ್ಕೆ ಬರದೇ ದುಸ್ಥಿತಿಗೆ ತಲುಪಿದ ಕಡಬದ ಸರ್ಕಾರಿ ಕಟ್ಟಡ - kadaba Government building unused

ಕಡಬದಲ್ಲಿ ಸಂತೆ ಮಾರುಕಟ್ಟೆ ನಡೆಸುವ ಸಲುವಾಗಿ ತಾಲೂಕು ತಹಶೀಲ್ದಾರರ ಕಚೇರಿಯ ಮುಂದೆಯೇ ನಿರ್ಮಾಣವಾಗಿರುವ ಕಟ್ಟಡವೀಗ ಸಾರ್ವಜನಿಕರ ಉಪಯೋಗಕ್ಕೆ ಬರದೇ ದುಸ್ಥಿತಿಗೆ ತಲುಪಿದೆ.

kadaba
ಸರ್ಕಾರಿ ಕಟ್ಟಡ

By

Published : Oct 6, 2020, 5:07 PM IST

ಕಡಬ: ತಾಲೂಕು ತಹಶೀಲ್ದಾರರ ಕಚೇರಿಯ ಎದುರು ಕೋಟಿಗಟ್ಟಲೆ ಹಣ ವ್ಯಯಿಸಿ ಎಪಿಎಂಸಿ ನಿರ್ಮಿಸಿದ ಕಟ್ಟಡವೀಗ ಸಾರ್ವಜನಿಕರ ಉಪಯೋಗಕ್ಕೆ ಬರದೇ ಗಬ್ಬು ನಾರುತ್ತಿದೆ.

ನಗರದಲ್ಲಿ ಸಂತೆ ಮಾರುಕಟ್ಟೆ ನಡೆಸುವ ಸಲುವಾಗಿ ಈ ಕಟ್ಟಡ ನಿರ್ಮಿಸಲಾಗಿತ್ತು. ಆದರೀಗ ಕಟ್ಟಡ ಕಟ್ಟಿಗೆ ಸಂಗ್ರಹಿಸಿಡಲು, ಗುಜರಿ ವಸ್ತುಗಳನ್ನು ತಂದು ಹಾಕಲು ಬಳಕೆಯಾಗುತ್ತಿದೆ. ಇದರ ಸುತ್ತಲೂ ಕಾಡು ಆವರಿಸಿದೆ. ಚರಂಡಿ ವ್ಯವಸ್ಥೆ ನಿರ್ವಹಣೆ ಮಾಡದೇ ವಾಸನೆ ಬರುತ್ತಾ ಸೊಳ್ಳೆ ಉತ್ಪತ್ತಿ ಕೇಂದ್ರವಾಗಿದೆ.

ಕಡಬದಲ್ಲಿ ಸಂತೆ ಮಾರುಕಟ್ಟೆ ನಡೆಸುವ ಸಲುವಾಗಿ ನಿರ್ಮಾಣವಾದ ಕಟ್ಟಡ ಇದೀಗ ಉಪಯೋಗಕ್ಕೆ ಬರದೇ ಅವನತಿ ಸ್ಥಿತಿಯತ್ತ ಸಾಗುತ್ತಿದೆ.

ಅತ್ಯಾಧುನಿಕ ಸುಸಜ್ಜಿತ ಕಟ್ಟಡ ಇದ್ದರೂ ಕಡಬದ ಸಂತೆಗೆ ಬರುವ ವ್ಯಾಪಾರಿಗಳು ಭಾನುವಾರದ ಸಂತೆಯ ದಿನದಂದು ರಸ್ತೆ ಬದಿಯಲ್ಲೇ ವ್ಯಾಪಾರ ಮಾಡುತ್ತಾರೆ. ಈ ಕಟ್ಟಡದಲ್ಲಿ ವ್ಯಾಪಾರ ಮಾಡಲು ಎಪಿಎಂಸಿ ಹಾಗೂ ಸ್ಥಳೀಯ ಪಂಚಾಯತ್ ಅವಕಾಶ ಕಲ್ಪಿಸದಿರುವುದು ಇದಕ್ಕೆ ಕಾರಣ.

ಕೂಡಲೇ ಸಂಬಂಧಿಸಿದ ಇಲಾಖಾಧಿಕಾರಿಗಳು ಎಪಿಎಂಸಿ ಕಟ್ಟಡವನ್ನು ಉಳಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು ಅನ್ನೋದು ಸಾರ್ವಜನಿಕರ ಮನವಿ.

ABOUT THE AUTHOR

...view details