ಕರ್ನಾಟಕ

karnataka

ETV Bharat / state

ಉಳ್ಳಾಲ: ಗೇಟ್​ ಹಿಡಿದು ಆಡುತ್ತಿದ್ದ ಬಾಲಕನ ಮೇಲೆ ಕಾಂಪೌಂಡ್​ ಕುಸಿದು ಸ್ಥಳದಲ್ಲೇ ಸಾವು - Compound collapses in Mangalore

ಮೂರು ವರ್ಷದ ಬಾಲಕನ ಮೇಲೆ ಕಂಪೌಂಡ್ ಕುಸಿದು ಸಾವನ್ನಪ್ಪಿರುವ ಘಟನೆ, ಉಳ್ಳಾಲದ ಸಮೀಪದ ಸಂತೋಷ ನಗರದಲ್ಲಿ ನಡೆದಿದೆ.

Compound collapses in Mangalore
ಕಂಪೌಂಡ್ ಕುಸಿದು ಮೂರು ವರ್ಷದ ಮಗು ಸಾವು

By

Published : Jun 8, 2020, 8:24 PM IST

ಉಳ್ಳಾಲ(ಮಂಗಳೂರು): ಗೇಟ್​ ಹಿಡಿದು ಆಟವಾಡುತ್ತಿದ್ದ ಮೂರು ವರ್ಷದ ಬಾಲಕನ ಮೇಲೆ ಕಂಪೌಂಡ್ ಕುಸಿದು ಸಾವನ್ನಪ್ಪಿರುವ ಘಟನೆ, ಮುನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂತೋಷ ನಗರದ ಬದ್ರಿಯಾ ಜುಮಾ ಮಸೀದಿ ಸಮೀಪ ನಡೆದಿದೆ.

ಕಂಪೌಂಡ್ ಕುಸಿದು ಮೂರು ವರ್ಷದ ಮಗು ಸಾವು

ಅಶ್ರಫ್ ಹಾಗೂ ಆಯೇಷಾ ದಂಪತಿಯ ಪುತ್ರ ಇಮಾನ್ (3) ಮೃತ ಬಾಲಕ. ಈತ ಗೇಟ್​ ಹಿಡಿದು ಆಟವಾಡುವ ಸಂದರ್ಭದಲ್ಲಿ ಏಕಾಏಕಿ ಕಂಪೌಂಡ್ ಗೋಡೆ ಕುಸಿದು ಮೇಲೆ ಬಿದ್ದಿದೆ. ಕಲ್ಲುಗಳಡಿ ಬಿದ್ದ ಬಾಲಕ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details