ಪುತ್ತೂರು (ದ.ಕ): ಭೂ ವ್ಯವಹಾರಕ್ಕೆ ಸಂಬಂಧಿಸಿದಂತೆ ಕಮಿಷನ್ ನೀಡದೇ ವಂಚಿಸಿದ್ದಾರೆ ಎಂದು ಮೂವರ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಮಿಷನ್ ನೀಡದೇ ವಂಚನೆ ಆರೋಪ: ದೂರು ದಾಖಲು
ಜಮೀನು ಮಾರಾಟ ವಿಷಯದಲ್ಲಿ ಕಮಿಷನ್ ಕೊಡದೇ ವಂಚನೆ ಎಸಗಿದ್ದಾರೆ ಎಂದು ಆರೋಪಿಸಿ ಮೂವರ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದರ್ಬೆ ನಿವಾಸಿ ಸದಾಶಿವ ಪೈ ದೂರು ದಾಖಲಿಸಿದ್ದಾರೆ. ಡಿಕೋಸ್ಟ್, ಜೇಮ್ಸ್, ಹಾಗೂ ರಿತೇಶ್ ಪಾಯಸ್ ಎಂಬವರ ವಿರುದ್ಧ ದೂರು ನೀಡಲಾಗಿದೆ. ಡಿಕೋಸ್ಟ್ ಎಂಬುವವರಿಗೆ ಸೇರಿದ ಜಮೀನನ್ನು ಮಾರಾಟ ಮಾಡಿ ಕೊಡುವಂತೆ ಜೇಮ್ಸ್ ಎಂಬುವರು ತನ್ನಲ್ಲಿ ಹೇಳಿದ್ದರು ಅದರಂತೆ ನಾನು ರಿತೇಶ್ ಪಾಯಸ್ ಎಂಬವರಿಗೆ ಜಮೀನು ತೋರಿಸಿ ಮಾರಾಟಕ್ಕೆ ಕೇಳಿಕೊಂಡಿದ್ದೆ. ಆದರೆ, ಮಾರಾಟದ ಪ್ರಕ್ರಿಯೆಯಲ್ಲಿ ನನ್ನನ್ನೂ ಸೇರಿಸಿಕೊಳ್ಳದೇ ಅವರೊಳಗೆ ವ್ಯವಹಾರ ಕುದುರಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಹಾಗೂ ನನಗೆ ಜಮೀನು ಮಾರಾಟದ ಕಮಿಷನ್ ಕೊಡದೇ ವಂಚನೆ ಮಾಡಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಇದರಲ್ಲಿ ರಿತೇಶ್ ಪಾಯಸ್ ಎಂಬಾತನ ವಿರುದ್ಧ ಈಗಾಗಲೇ ವಂಚನೆ ಸಹಿತ ಹಲವು ಪ್ರಕರಣಗಳು ದಾಖಲಾಗಿವೆ. ಈತನ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದು, ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.