ಉಳ್ಳಾಲ: ಗಾಂಧಿ ಜಯಂತಿಯಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಗೆ ಧಕ್ಕೆಯಾಗುವಂತಹ ವಿಡಿಯೋ ಎಡಿಟ್ ಮಾಡಿ ಟ್ರೋಲ್ ಮಾಡಿದ್ದ ಯುವಕನ ವಿರುದ್ಧ ಕೊಣಾಜೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಗಾಂಧಿ ಜಯಂತಿಯಂದು ರಾಷ್ಟ್ರಪಿತನಿಗೆ ಅವಮಾನ: ಯುವಕನ ವಿರುದ್ಧ ದೂರು - Gandhi Jayanti
ಗಾಂಧಿ ಜಯಂತಿಯಂದು ರಾಷ್ಟ್ರಪಿತನಿಗೆ ಅವಮಾನವಾಗುವಂತೆ ವಿಡಿಯೋ ಎಡಿಟ್ ಮಾಡಿ ಸ್ಟೇಟಸ್ ಹಾಕಿದ್ದ ಯುವಕನ ವಿರುದ್ಧ ಡಿವೈಎಫ್ಐ ನಿಯೋಗ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ.
manglure
ಗಾಂಧೀಜಿಗೆ ಅವಮಾನವಾಗುವಂತೆ ವಿಡಿಯೋ ಎಡಿಟ್ ಮಾಡಿರುವ ಹರೇಕಳ ಗ್ರಾಮದ ಪ್ರಜ್ವಲ್ ಎಂಬಾತ ಮೊಬೈಲ್ನಲ್ಲಿ ಸ್ಟೇಟಸ್ ಹಾಕಿ, ವಿಕೃತಿ ಮೆರೆದಿರುವುದಾಗಿ ಡಿವೈಎಫ್ಐ ಸಂಘಟನೆ ದೂರಿದೆ.
ಗಾಂಧಿ ಯುವತಿಯೊಂದಿಗಿದ್ದ ಹಳೇ ಫೋಟೋವೊಂದನ್ನು ತುಳುವಿನ ಹಾಡೊಂದಕ್ಕೆ ಹೆಜ್ಜೆ ಹಾಕಿರುವ ರೀತಿ ವಿಡಿಯೋ ಎಡಿಟ್ ಮಾಡಲಾಗಿದೆ. ಹಾಗಾಗಿ, ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಸಂಘಟನೆ ಎಚ್ಚರಿಸಿದೆ.