ದಕ್ಷಿಣ ಕನ್ನಡ :ರೋಗಿ ಎಂದು ಹೇಳಿಕೊಂಡು ಆ್ಯಂಬುಲೆನ್ಸ್ ಮೂಲಕ ಊರಿಗೆ ಬಂದ ಘಟನೆಗೆ ಸಂಬಂಧಿಸಿ ಐವತೊಕ್ಲು ಗ್ರಾಮದ ಅಳ್ಪೆ ವಿಜಯಕುಮಾರ್ ಎಂಬವರ ಮೇಲೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ನಿಯಮ ಉಲ್ಲಂಘಿಸಿ ಸಂಚಾರ ಮಾಡಿ, ಸಾರ್ವಜನಿಕರಿಗೆ ತೊಂದರೆ ಮಾಡಿದಕ್ಕಾಗಿ ಪ್ರಕರಣ ದಾಖಲಾಗಿದೆ.
ಬಾಡಿಗೆ ಆ್ಯಂಬ್ಯುಲೆನ್ಸ್ನಲ್ಲಿ ಊರಿಗೆ ಬಂದ ಯುವಕನ ವಿರುದ್ಧ ಕೇಸು ದಾಖಲು - ಬಾಡಿಗೆ ಅಂಬ್ಯುಲೆನ್ಸ್ನಲ್ಲಿ ಊರಿಗ ಬಂದ ವ್ಯಕ್ತಿ
ದೂರದ ಊರಿನಿಂದ ಅದರಲ್ಲೂ ಆ್ಯಂಬ್ಯುಲೆನ್ಸ್ ಮೂಲಕ ಬಂದದ್ದಕ್ಕಾಗಿ ಊರಿನವರು ಆತಂಕಗೊಂಡಿದ್ದರು. ದೂರನ್ನಾಧರಿಸಿ ಯುವಕನನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಪರೀಕ್ಷಿಸಲಾಗಿದ್ದು, ಸದ್ಯ ಕೊರೊನಾಕ್ಕೆ ಸಂಬಂಧಿಸಿ ಲಕ್ಷಣ ಕಂಡು ಬರದ ಹಿನ್ನೆಲೆಯಲ್ಲಿ ಮನೆಗೆ ವಾಪಸ್ ಕಳುಹಿಸಲಾಗಿದೆ.
ವಿಜಯಕುಮಾರ್ ಎಂಬವರು ರಾಯಚೂರಿನಲ್ಲಿ ಕೆಲಸದಲ್ಲಿದ್ದು ಊರಿಗೆ ಬರುವ ಉದ್ದೇಶದಿಂದ ಕುಂದಾಪುರದ ಮಿತ್ರನ ಮನೆಗೆ ಬಂದು ಬಳಿಕ ಆ್ಯಂಬುಲೆನ್ಸ್ ಮೂಲಕ ಊರಿಗೆ ತಲುಪಿದ್ದರು. ಊರಿಗೆ ಬಂದ ಆ್ಯಂಬ್ಯುಲೆನ್ಸ್ ನೋಡಿದ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಂಜ ಗ್ರಾ.ಪಂ ಪಿಡಿಒ ಅವರಿಗೆ ದೂರು ಸಲ್ಲಿಸಿದ್ದರು. ಇದನ್ನಾಧರಿಸಿ ಪಿಡಿಒ ಸುಬ್ರಹ್ಮಣ್ಯ ಠಾಣೆಯಲ್ಲಿ ಯುವಕನ ವಿರುದ್ದ ದೂರು ಸಲ್ಲಿಸಿದ್ದರು.
ದೂರದ ಊರಿನಿಂದ ಅದರಲ್ಲೂ ಆ್ಯಂಬ್ಯುಲೆನ್ಸ್ ಮೂಲಕ ಬಂದದ್ದಕ್ಕಾಗಿ ಊರಿನವರು ಆತಂಕಗೊಂಡಿದ್ದರು. ದೂರನ್ನಾಧರಿಸಿ ಯುವಕನನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಪರೀಕ್ಷಿಸಲಾಗಿದ್ದು, ಸದ್ಯ ಕೊರೊನಾಕ್ಕೆ ಸಂಬಂಧಿಸಿ ಲಕ್ಷಣ ಕಂಡು ಬರದ ಹಿನ್ನೆಲೆಯಲ್ಲಿ ಮನೆಗೆ ವಾಪಸ್ ಕಳುಹಿಸಿರುವುದಾಗಿ ತಿಳಿದು ಬಂದಿದೆ.