ಕರ್ನಾಟಕ

karnataka

ETV Bharat / state

ಯೋಗಿ ವಿರುದ್ಧ ಅವಹೇಳನಕಾರಿ ಮಾತು : ಮಿಥುನ್​​ ರೈ ವಿರುದ್ಧ ದೂರು ದಾಖಲು

ಯೋಗಿ ಆದಿತ್ಯನಾಥ್ ವಿರುದ್ಧ ಅವಹೇಳನಕಾರಿ ಹೇಳಿಕೆ, ಯೂತ್ ಕಾಂಗ್ರೇಸ್ ಅಧ್ಯಕ್ಷ ಮಿಥುನ್ ರೈ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲು.

Complaint against Mithun Rai
ಯೋಗಿ ವಿರುದ್ಧ ಅವಹೇಳನಕಾರಿ ಮಾತು : ಮಿಥುನ್​​ ರೈ ವಿರುದ್ಧ ದೂರು ದಾಖಲು

By

Published : Oct 10, 2020, 8:17 PM IST

ಪುತ್ತೂರು : ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಅವಮಾನಕಾರಿ ಹೇಳಿಕೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಯುವ ಕಾಂಗ್ರೆಸ್​ ಅಧ್ಯಕ್ಷ ಮಿಥುನ್ ರೈ ವಿರುದ್ಧ ದೂರು ದಾಖಲಾಗಿದೆ.

ಮಿಥುನ್​​ ರೈ ವಿರುದ್ಧ ದೂರು ದಾಖಲು

ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಹಿಂದೂ ಜಾಗರಣ ವೇದಿಕೆಯ ಪ್ರಧಾನ ಕಾರ್ಯದರ್ಶಿ ಅವಿನಾಶ್ ಪುರುಷರ ಕಟ್ಟೆ, ಮಿಥುನ್ ರೈ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಯೋಗಿ ವಿರುದ್ಧ ಅವಹೇಳನಕಾರಿ ಮಾತು : ಮಿಥುನ್​​ ರೈ ವಿರುದ್ಧ ದೂರು ದಾಖಲು

ಯೋಗಿ ಆದಿತ್ಯನಾಥ್ ಹಿಂದೂ ಧರ್ಮದ ಹಾಗೂ ನಾಥ ಪಂಥದ ಗುರುವಾಗಿದ್ದು, ಸ್ವಾಮೀಜಿ ಸ್ಥಾನದಲ್ಲಿರುವ ಅವರ ವಿರುದ್ಧ ಮಿಥುನ್ ರೈ ಅವಹೇಳನಕಾರಿಯಾಗಿ ಮಾತನಾಡಿರುವುದು ಹಿಂದೂ ಧರ್ಮದ ಅನುಯಾಯಿಗಳ ಭಾವನೆಗೆ ಧಕ್ಕೆಯಾಗಿದೆ ಎಂದೂ ದೂರಿನಲ್ಲಿ ಆರೋಪಿಸಲಾಗಿದೆ.

ಉತ್ತರ ಪ್ರದೇಶದ ಹಥ್ರಾಸ್​​ನಲ್ಲಿ ದಲಿತ ಯುವತಿಯ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಸಂಬಂಧ ಮಂಗಳೂರಿನ ತೊಕ್ಕೋಟಿನಲ್ಲಿ ಪ್ರತಿಭಟನೆಯನ್ನು ಉದ್ದೇಶಿಸಿ ಮಿಥುನ್ ರೈ ಮಾತನಾಡಿದ್ದರು.

ಯೋಗಿ ಆದಿತ್ಯನಾಥ ಒಬ್ಬ ಗಂಡಸಾ, ಆವ ಓರ್ವ ಅಯೋಗ್ಯ, ಅವ ಒಬ್ಬ ಹಿಂದೂ ಎಂದು ಹೇಳಲು ನಾಚಿಕೆಯಾಗುತ್ತದೆ. ಆತ ಕರ್ನಾಟಕ ಹಾಗೂ ದಕ್ಷಿಣ ಕನ್ನಡಕ್ಕೆ ಬಂದರೆ ಆತನ ಮುಖಕ್ಕೆ ಮಸಿ ಬಳಿಯುವುದಾಗಿ ಹೇಳಿಕೆ ನೀಡಿದ್ದರು.

ABOUT THE AUTHOR

...view details