ದಕ್ಷಿಣ ಕನ್ನಡ: ಅಪ್ರಾಪ್ತೆಯನ್ನು ಮದುವೆಯಾಗಿ, ಗರ್ಭವತಿಯನ್ನಾಗಿಸಿದ ಆರೋಪದ ಮೇಲೆ ಪುತ್ತೂರು ಕೋಡಿಂಬಾಡಿ ಗ್ರಾಮದ ವ್ಯಕ್ತಿಯೊಬ್ಬನ ಮೇಲೆ ವಿಟ್ಲ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.
16 ವರ್ಷ 3 ತಿಂಗಳು ವಯಸ್ಸಿನ ಬಾಲಕಿ ಎರಡು ವರ್ಷಗಳಿಂದ ತನ್ನ ದೂರದ ಬಂಧುವನ್ನು ಪ್ರೀತಿಸುತ್ತಿದ್ದು, 2019ರ ಡಿ.26ರಂದು ಇವರಿಬ್ಬರೇ ಹೋಗಿ ಮದುವೆಯಾಗಿದ್ದರು. ಬಳಿಕ ಯುವಕ ಅಪ್ರಾಪ್ತೆಯ ಮನೆಯಲ್ಲಿಯೇ ವಾಸ್ತವ್ಯವಿದ್ದ ಎನ್ನಲಾಗಿದೆ.