ಮಂಗಳೂರು: ನಗರದ ಗೋಲಿಬಾರ್‌ನಲ್ಲಿ ಮೃತಪಟ್ಟ ಇಬ್ಬರ ಪರಿಹಾರ ಹಣವನ್ನು ವಾಪಾಸ್ ಪಡೆಯಲು ನಿರ್ಧಾರ ಮಾಡಿರುವುದು ರಾಜ್ಯ ಸರ್ಕಾರದ ಕೆಟ್ಟ ನಿರ್ಧಾರವಾಗಿದೆ ಎಂದು ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದ್ದಾರೆ.
ಗೋಲಿಬಾರ್ ಸಂತ್ರಸ್ತರಿಗೆ ಪರಿಹಾರ ವಾಪಾಸ್ ರಾಜ್ಯ ಸರ್ಕಾರದ ಕೆಟ್ಟ ನಿರ್ಧಾರ: ಸಸಿಕಾಂತ್ ಸೆಂಥಿಲ್ - ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್
ಮಂಗಳೂರು ಪೊಲೀಸ್ ಗೋಲಿಬಾರ್‌ನಲ್ಲಿ ಮೃತಪಟ್ಟ ಇಬ್ಬರ ಕುಟುಂಬದವರಿಗೆ ಪರಿಹಾರ ಹಣವನ್ನು ವಾಪಾಸ್ ಪಡೆಯಲು ಸರ್ಕಾರ ನಿರ್ಧಾರ ಮಾಡಿರುವುದು ರಾಜ್ಯ ಸರ್ಕಾರದ ಕೆಟ್ಟ ನಿರ್ಧಾರವಾಗಿದೆ ಎಂದು ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದ್ದಾರೆ.
ಸಸಿಕಾಂತ್ ಸೆಂಥಿಲ್
ಮಂಗಳೂರಿನಲ್ಲಿ ಮಾತನಾಡಿದ ಅವರು, ನಗರದಲ್ಲಿ ನಡೆದ ಪೊಲೀಸ್ ಗೋಲಿಬಾರ್ ಪ್ರಕರಣದಿಂದ ತುಂಬಾ ಬೇಜಾರಾಗಿದೆ. ಎರಡು ಜೀವಗಳು ಬಲಿಯಾಗಿವೆ. ಘಟನೆಯಲ್ಲಿ ಮೃತಪಟ್ಟವರ ಕುಟುಂಬದವರಿಗೆ ಘೋಷಿಸಲಾದ ಪರಿಹಾರ ಹಣ ವಾಪಸ್ ಪಡೆಯುವ ರಾಜ್ಯ ಸರ್ಕಾರದ ನಿರ್ಧಾರ ಕೆಟ್ಟದ್ದು ಎಂದರು.
ಸಿಎಎ, ಎನ್ಆರ್ಸಿ ಮಸೂದೆ ಬಡವರ ವಿರುದ್ಧವಾಗಿದೆ. ಇದರಿಂದ ದೇಶ ವಿಭಜನೆಯಾಗುತ್ತದೆ. ಬಡವರು,ಮಧ್ಯಮ ವರ್ಗದ ಜನರಿಗೆ ತೊಂದರೆಯಾಗುತ್ತದೆ. ದೇಶಕ್ಕೆ ಈ ಕಾಯ್ದೆಯ ಅವಶ್ಯಕತೆ ಇಲ್ಲ ಎಂದರು.