ಮಂಗಳೂರು: ಕೋಮು ದ್ವೇಷವನ್ನು ಹರಡುವ ಸಂದೇಶಗಳನ್ನು ವಾಟ್ಸ್ ಆ್ಯಪ್ ಗ್ರೂಫ್ಗಳಲ್ಲಿ ಹರಿಬಿಟ್ಟಿದ್ದಕ್ಕಾಗಿ ಓರ್ವ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಕೋಮು ದ್ವೇಷದ ಸಂದೇಶ ವೈರಲ್: ಓರ್ವನ ಬಂಧನ - social network
ಉಳ್ಳಾಲ ನಿವಾಸಿ ಝಾಕೀರ್ ಉಳ್ಳಾಲ್ ಬಂಧಿತ ಆರೋಪಿ. ಝಾಕೀರ್ ಕೋಮು ದ್ವೇಷವನ್ನು ಹರಡುವ ಸಂದೇಶಗಳನ್ನು ವಾಟ್ಸ್ ಆ್ಯಪ್ ಗ್ರೂಫ್ಗಳಲ್ಲಿ ಕಳುಹಿಸುತ್ತಿದ್ದಾರೆಂಬ ದೂರುಗಳು ಪೊಲೀಸರಿಗೆ ಬಂದಿತ್ತು.
ಓರ್ವನ ಬಂಧನ
ಉಳ್ಳಾಲ ನಿವಾಸಿ ಝಾಕೀರ್ ಉಳ್ಳಾಲ್ ಬಂಧಿತ ಆರೋಪಿ. ಝಾಕೀರ್ ಕೋಮು ದ್ವೇಷವನ್ನು ಹರಡುವ ಸಂದೇಶಗಳನ್ನು ವಾಟ್ಸ್ ಆ್ಯಪ್ ಗ್ರೂಫ್ಗಳಲ್ಲಿ ಕಳುಹಿಸುತ್ತಿದ್ದಾರೆಂಬ ದೂರುಗಳು ಪೊಲೀಸರಿಗೆ ಬಂದಿತ್ತು.
ಈ ಹಿನ್ನೆಲೆಯಲ್ಲಿ ಝಾಕೀರ್ನನ್ನು ಪೊಲೀಸರು ಠಾಣೆಗೆ ಕರೆಸಿ ತನಿಖೆ ನಡೆಸಿದ್ದಾರೆ. ಈ ಸಂದರ್ಭ ಆತನ ಮೊಬೈಲ್ ಫೋನ್ನನ್ನು ಪರಿಶೀಲನೆ ನಡೆಸಿದಾಗ, ಕೋಮುದ್ವೇಷ ಹರಡುವ ಸಂದೇಶಗಳನ್ನು ರವಾನೆ ಮಾಡಿರುವ ಬಗ್ಗೆ ಪುರಾವೆಗಳು ದೊರಕಿದೆ. ತಕ್ಷಣ ಪೊಲೀಸರು ಆತನನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.