ಉಳ್ಳಾಲ (ದಕ್ಷಿಣಕನ್ನಡ): ತೊಕ್ಕೊಟು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಮಂಗಳವಾರದಂದು ಅಪಘಾತದಲ್ಲಿ ನವದಂಪತಿ ಮೃತಪಟ್ಟಿದ್ದರು. ಘಟನಾ ಸ್ಥಳಕ್ಕೆ ಪೊಲೀಸ್ ಕಮೀಷನರ್ ವಿಕಾಸ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.
ಅವೈಜ್ಞಾನಿಕ ತಿರುವಿಗೆ ಪ್ರಾಣತೆತ್ತ ನವದಂಪತಿ: ಘಟನಾ ಸ್ಥಳಕ್ಕೆ ಕಮೀಷನರ್ ಭೇಟಿ ನವಯುಗ ಸಂಸ್ಥೆ ಅಧಿಕಾರಿಗಳು ಹಾಗೂ ಸಂಚಾರಿ ಠಾಣಾ ಡಿಸಿಪಿ ಜೊತೆ ಚರ್ಚಿಸಿ ತಕ್ಷಣಕ್ಕೆ ಸುರಕ್ಷತಾ ಕ್ರಮ ಜಾರಿ ಮಾಡುವಂತೆ ಸೂಚಿಸಿದರು.
ಅವೈಜ್ಞಾನಿಕ ತಿರುವು ಸಾರ್ವಜನಿಕರ ಆಕ್ರೋಶ: ತೊಕ್ಕೊಟ್ಟು ಓವರ್ ಬ್ರಿಡ್ಜ್ ನಿತ್ಯ ಅಪಘಾತಗಳು ನಡೆಯುತ್ತಲೇ ಇದೆ. ಫ್ಲೈಓವರ್ ಕೊನೆಗೊಳ್ಳುವ ತೊಕ್ಕೊಟ್ಟು ಓವರ್ ಬ್ರಿಡ್ಜ್ ಸ್ಥಳದಲ್ಲಿಯೇ ಉಳ್ಳಾಲಕ್ಕೆ ಹೋಗುವ ದಾರಿ ಇರುವುದರಿಂದ ಅಪಘಾತವನ್ನು ಆಹ್ವಾನಿಸುತ್ತಲೇ ಇದೆ. ವಾರದ ಹಿಂದೆ ಬಸ್ ಮತ್ತು ಲಾರಿ ನಡುವೆ ಅಪಘಾತ ನಡೆದ ಸಂದರ್ಭದಲ್ಲಿ ಮಾಧ್ಯಮಗಳಲ್ಲಿ ಎಚ್ಚರಿಕೆಯನ್ನು ನೀಡಲಾಗಿತ್ತು. ಆದಾಗಿ ವಾರ ಕಳೆಯುವುದರೊಳಗೆ ನವದಂಪತಿ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಓವರ್ ಬ್ರಿಡ್ಜ್ ಕೊನೆಗೊಳ್ಳುವ ಮೂಲೆಯಲ್ಲಿ ನಿಂತು ದಂಡ ವಿಧಿಸುವ ಪೊಲೀಸರು, ಫ್ಲೈಓವರ್ನಲ್ಲಿ ನಿಂತು ವಾಹನಗಳ ವೇಗವನ್ನು ತಡೆಯಲು ಪ್ರಯತ್ನಿಸುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.