ಕರ್ನಾಟಕ

karnataka

ETV Bharat / state

'ಕುಡ್ಲದ ಎನ್ನ ಮೋಕೆದ ಜನಕುಲೇ...' ತುಳುವಿನಲ್ಲೇ ವಿದಾಯ ಪತ್ರ ಬರೆದ ಪಿ.ಎಸ್​. ಹರ್ಷ - ಮಂಗಳೂರು ಸಿಟಿ

ಮಂಗಳೂರು ಸಿಟಿ ಪೊಲೀಸ್ ಫೇಸ್​ಬುಕ್​ನಲ್ಲಿ ಈ ಸುದೀರ್ಘ ಪತ್ರ ಬರೆದಿರುವ ಐಪಿಎಸ್​ ಅಧಿಕಾರಿ ನಿರ್ಗಮಿತ ಮಂಗಳೂರು ನಗರ ಪೊಲೀಸ್​ ಆಯುಕ್ತ ಪಿ.ಎಸ್. ಹರ್ಷ ಇಡೀ ಪತ್ರವನ್ನು ತುಳು ಭಾಷೆಯಲ್ಲಿಯೇ ಬರೆದಿದ್ದಾರೆ.

P.S Harsha
ಪಿ.ಎಸ್​. ಹರ್ಷ

By

Published : Jun 28, 2020, 6:37 PM IST

Updated : Jun 28, 2020, 7:35 PM IST

ಮಂಗಳೂರು:ನಗರದ ಪೊಲೀಸ್ ಆಯುಕ್ತರಾಗಿದ್ದ ಡಾ. ಪಿ.ಎಸ್. ಹರ್ಷ ಅವರಿಗೆ ಬೆಂಗಳೂರಿಗೆ ವರ್ಗಾವಣೆ ಆಗಿದ್ದು, ತಾವು ಸೇವೆ ಸಲ್ಲಿಸಿರುವ ಮಂಗಳೂರಿನ ಜನತೆಗೆ ತುಳು ಭಾಷೆಯಲ್ಲಿ ಪ್ರೀತಿಪೂರ್ವಕವಾಗಿ ವಿದಾಯ ಪತ್ರ ಬರೆದಿದ್ದಾರೆ.

ಮಂಗಳೂರು ಸಿಟಿ ಪೊಲೀಸ್ ಫೇಸ್​ಬುಕ್​ನಲ್ಲಿ ಈ ಸುದೀರ್ಘ ಪತ್ರ ಬರೆದಿರುವ ಅವರು ಇಡೀ ಪತ್ರವನ್ನು ತುಳು ಭಾಷೆಯಲ್ಲಿಯೇ ಬರೆದಿರೋದು ವಿಶೇಷವಾಗಿದೆ. ಕುಡ್ಲದ ಎನ್ನ ಮೋಕೆದ ಜನಕುಲೇ, (ಕುಡ್ಲದ ನನ್ನ ಪ್ರೀತಿಯ ಜನಗಳೇ) ಎಂದು ಪ್ರೀತಿಪೂರ್ವಕವಾಗಿ ಬರೆದುಕೊಂಡಿದ್ದಾರೆ. ಮಂಗಳೂರು ಸಿಟಿ ಪೊಲೀಸ್ ಫೇಸ್​ಬುಕ್​ನಲ್ಲಿ ಕೆಲ ಗಂಟೆಗಳ ಹಿಂದಷ್ಟೇ ಪೋಸ್ಟ್ ಮಾಡಿದ್ದಾರೆ.

ಕುಡ್ಲದ ಎನ್ನ ಮೋಕೆದ ಜನಕುಲೇ... ಎಂದು ಶುರುವಾದ ಈ ಪತ್ರದಲ್ಲಿರುವ ಮಾಹಿತಿಯನ್ನು ಓದಿ..

Last Updated : Jun 28, 2020, 7:35 PM IST

ABOUT THE AUTHOR

...view details