ಚಿಕ್ಕಮಗಳೂರು:ಕಾಫಿ ಕೆಫೆ ಡೇ ಮಾಲಿಕ ಸಿದ್ದಾರ್ಥ್ ಅವರ ಹುಟ್ಟೂರಾದ ಮೂಡಿಗೆರೆ ತಾಲೂಕಿನ ಚಿಕ್ಕನಹಳ್ಳಿ ಬಳಿಯ ಚೇತನ ಎಸ್ಟೇಟ್ನಲ್ಲಿ ಅಂತಿಮ ದರ್ಶನ ಹಾಗೂ ಅಂತ್ಯ ಕ್ರಿಯೆಗೆ ಸಿದ್ಧತೆ ನಡೆಸಲಾಗುತ್ತಿದೆ.
ಮೂಡಿಗೆರೆಯಲ್ಲಿ ಬ್ಲಾಕ್ 'ಡೇ': ಚೇತನ ಎಸ್ಟೇಟ್ನಲ್ಲಿ ಸಿದ್ಧಾರ್ಥ್ ಅಂತಿಮ ದರ್ಶನಕ್ಕೆ ಸಿದ್ಧತೆ - coffie cafe day chairman siddharth Funeral
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಿಕ್ಕನಹಳ್ಳಿ ಬಳಿಯ ಚೇತನ ಎಸ್ಟೇಟ್ನಲ್ಲಿ ಕಾಫಿ ಕೆಫೆ ಡೇ ಮಾಲಿಕ ಸಿದ್ದಾರ್ಥ್ ಅವರ ಅಂತಿಮ ದರ್ಶನ ಹಾಗೂ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ನಡೆಯುತ್ತಿರುವುದು. ಸಿದ್ಧಾರ್ಥ್ ಅವರು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅಳಿಯ ಆಗಿದ್ದು, ನಾಪತ್ತೆಯಾಗಿದ್ದರಿಂದ ಹಲವು ಅನುಮಾನಗಳು ಮೂಡಿದ್ದವು.
ಕಾಫಿ ಕೆಫೆ ಡೇ ಮಾಲಿಕ ಸಿದ್ಧಾರ್ಥ್ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ
ಮಂಗಳೂರಿನಿಂದ ನೇರವಾಗಿ ಚಿಕ್ಕಮಗಳೂರಿನ ಎಬಿಸಿ ಆವರಣಕ್ಕೆ ಮೃತದೇಹ ತರಲಾಗುತ್ತಿದ್ದು. ಕೆಲ ಸಮಯ ದರ್ಶನಕ್ಕೆ ಇಟ್ಟು, ಚಿಕ್ಕನಹಳ್ಳಿ ಎಸ್ಟೇಟ್ಗೆ ತರಲಾಗುವುದು. ಅಪಾರ ಸಂಖ್ಯೆಯಲ್ಲಿ ಸಂಬಂಧಿಕರು, ಸ್ನೇಹಿತರ ದಂಡು ಹರಿದು ಬರುತ್ತಿದ್ದು ಪೊಲೀಸ್ ಕಾವಲು ಕೂಡ ಹಾಕಲಾಗಿದೆ. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅಳಿಯ ಆಗಿದ್ದರಿಂದ ಅನೇಕ ರಾಜಕೀಯ ನಾಯಕರು ಆಗಮಿಸಲಿದ್ದಾರೆ. ಮನೆಯ ಪಕ್ಕದಲ್ಲೇ ಇರುವ ಆವರಣದಲ್ಲಿ ಅಂತ್ಯ ಸಂಸ್ಕಾರಕ್ಕೆ ಸಕಲ ಸಿದ್ಧತೆ ಕೂಡ ನಡೆಸಲಾಗುತ್ತಿದೆ.