ಮಂಗಳೂರು:ಭಾರೀ ಮಳೆಯಿಂದಾಗಿ ರಸ್ತೆ ಪಕ್ಕದಲ್ಲೇ ಇದ್ದ ತೆಂಗಿನ ಮರವೊಂದು ಉರುಳಿ ಬಿದ್ದಿದೆ. ಪದವಿನಂಗಡಿ ಬಳಿಯ ಏರ್ಪೋರ್ಟ್ ರಸ್ತೆಯಲ್ಲಿ ಘಟನೆ ನಡೆದಿದೆ.
ವಿಡಿಯೋ: ಮಂಗಳೂರಿನಲ್ಲಿ ನೋಡ ನೋಡುತ್ತಿದ್ದಂತೆ ರಸ್ತೆಗೆ ಅಡ್ಡವಾಗಿ ಉರುಳಿದ ತೆಂಗಿನ ಮರ - ಮಂಗಳೂರು
ರಸ್ತೆ ಪಕ್ಕದಲ್ಲಿದ್ದ ತೆಂಗಿನ ಮರ ಗಾಳಿ, ಮಳೆಯ ಹೊಡೆತಕ್ಕೆ ಧರೆಗುರುಳಿತು. ಮರ ಬೀಳುವ ವೇಳೆಗೆ ರಸ್ತೆಯಲ್ಲಿ ವಾಹನ ಸಂಚಾರ ವಿರಳವಿದ್ದ ಕಾರಣ ಅನಾಹುತ ತಪ್ಪಿದೆ.
ನೋಡ ನೋಡುತ್ತಿದ್ದಂತೆ ರಸ್ತೆಗೆ ಬಿದ್ದ ತೆಂಗಿನ ಮರ
ಇಂದು ನಗರದಲ್ಲಿ ಮಳೆಯ ಜೊತೆಗೆ ಗಾಳಿಯೂ ಜೋರಾಗಿತ್ತು. ರಸ್ತೆಯ ಒಂದು ಬದಿಯಲ್ಲಿದ್ದ ಆಕಾಶದೆತ್ತರದ ತೆಂಗಿನ ಮರ ಗಾಳಿಯ ಹೊಡೆತಕ್ಕೆ ಸಿಲುಕಿ ಬಾಗಿ ಇನ್ನೇನು ಬೀಳುವ ಹಂತ ತಲುಪಿತ್ತು. ಆದರೆ ಈ ವೇಳೆ ರಸ್ತೆಯಲ್ಲಿ ಎಂದಿನಂತೆ ವಾಹನ ಸಂಚಾರವೂ ಸಹ ಇತ್ತು. ಮರ ಬೀಳುವಾಗ ರಸ್ತೆ ಖಾಲಿಯಾಗಿದ್ದು, ಯಾವೊಬ್ಬ ಸವಾರರಿಗೂ ಹಾನಿಯಾಗಿಲ್ಲ.