ಕರ್ನಾಟಕ

karnataka

ETV Bharat / state

ಲೋಹದ ಪಾತ್ರೆಗಳಿಂದ ಮತ್ತೆ ಮಣ್ಣಿನ ಮಡಿಕೆಯತ್ತ ಆಕರ್ಷಿತರಾಗುತ್ತಿರುವ ಕರಾವಳಿ ಜನ - ಈಟಿವಿ ಭಾರತ್ ಕನ್ನಡ ಸುದ್ದಿ

ಕರಾವಳಿ ಜನರು ಲೋಹದ ಪಾತ್ರೆಗಳಿಂದ ಮಣ್ಣಿನ ಪಾತ್ರೆಗಳ ಬಳಕೆಗೆ ಮುಂದಾಗಿದ್ದಾರೆ.

ಮಣ್ಣಿನ ಮಡಿಕೆ ತಯಾರಿಕೆ
ಮಣ್ಣಿನ ಮಡಿಕೆ ತಯಾರಿಕೆ

By

Published : Aug 14, 2023, 9:54 PM IST

ಕುಂಬಾರರ ಗುಡಿ ಕೈಗಾರಿಕಾ ತಾಂತ್ರಿಕ ಮುಖ್ಯಸ್ಥ ರಮೇಶ್​ ಮಾತನಾಡಿದ್ದಾರೆ

ಮಂಗಳೂರು :ಆಧುನಿಕ ಯುಗದಲ್ಲಿ ಅಡುಗೆ ಮನೆಯಿಂದ ಮರೆಯಾದ ಮಣ್ಣಿನ ಅಡುಗೆ ಪಾತ್ರೆಗಳಿಗೆ ಇಂದು ಮತ್ತೆ ಬೇಡಿಕೆ ಬರಲಾರಂಭಿಸಿದೆ. ಕುಂಬಾರಿಕೆ ಕಾಯಕದಿಂದ ದೂರ ಸರಿಯುತ್ತಿರುವ ಯುವ ಪೀಳಿಗೆಯನ್ನು ಮತ್ತೆ ಕುಂಬಾರಿಕೆಗೆ ಸೆಳೆಯಲು ಕುಂಬಾರಿಕೆಯಲ್ಲಿ ಆಧುನಿಕ ಯಂತ್ರಗಳನ್ನು ಪರಿಚಯಿಸಲಾಗುತ್ತಿದೆ.

ಮಣ್ಣಿನ ಮಡಿಕೆಗಳ ಜಾಗವನ್ನು ಆಧುನಿಕ ಯುಗದಲ್ಲಿ ಸ್ಟೀಲ್ ಹಾಗೂ ಇತರ ಲೋಹಗಳಿಂದ ತಯಾರಿಸಲಾದ ಪಾತ್ರೆಗಳು ಅತಿಕ್ರಮಿಸಿಕೊಂಡಿವೆ. ಒಂದು ಸಮಯದಲ್ಲಿ ಮಣ್ಣಿನ ಮಡಿಕೆಗಳು ಹಾಗೂ ಕುಂಬಾರಿಕೆ ವೃತ್ತಿಯೇ ಮಾಯವಾಗುತ್ತದೆ ಎನ್ನುವ ಆತಂಕದಲ್ಲಿದ್ದ ಪರಿಸ್ಥಿತಿ ಇಂದು ಮತ್ತೆ ತಿಳಿಯಾಗಿದೆ.

ಮಣ್ಣಿನ ಅಡುಗೆ ಪಾತ್ರೆಗಳಿಗೆ ಹೆಚ್ಚಿನ ಬೇಡಿಕೆ: ಸಾಂಪ್ರದಾಯಿಕ ರೀತಿಯಲ್ಲಿ ನಡೆಯುತ್ತಿದ್ದ ಕುಂಬಾರಿಕೆಗೆ ಆಧುನಿಕ ಯಂತ್ರಗಳ ಪರಿಚಯವಾದ ಬಳಿಕ ಸ್ಟೀಲ್ ಹಾಗೂ ಇತರ ಲೋಹಗಳಿಂದ ತಯಾರಾದ ಪಾತ್ರೆಗಳಿಗೆ ಸರಿಸಾಟಿಯಾಗಿ ಮಣ್ಣಿನ ಮಡಿಕೆಗಳನ್ನೂ ತಯಾರಿಸಲಾಗುತ್ತಿದೆ. ಮಣ್ಣನ್ನು ಬಳಸಿ ಅಡುಗೆ ಪಾತ್ರೆಗಳ ಜೊತೆಗೆ ಹಲವು ರೀತಿಯ ಅಲಂಕಾರಿಕ ವಸ್ತುಗಳೂ ಇದೀಗ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಇವುಗಳಲ್ಲಿ ಇತ್ತೀಚಿನ ದಿನಗಳಲ್ಲಿ ಅಡುಗೆ ಪಾತ್ರೆಗಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿದೆ.

ಸ್ಟೀಲ್ ಹಾಗೂ ಇತರ ಲೋಹಗಳಿಂದ ತಯಾರಿಸಲಾಗುತ್ತಿದ್ದ ಪಾತ್ರೆಗಳ ಸ್ಥಾನವನ್ನು ಇಂದು ಹಲವು ಮನೆಗಳಲ್ಲಿ ಮಣ್ಣಿನ ಪಾತ್ರೆಗಳೇ ತುಂಬುತ್ತಿವೆ. ಈ ಹಿಂದೆ ಮಾನವಶಕ್ತಿಯನ್ನು ಬಳಸಿ ತಯಾರಿಸಲಾಗುತ್ತಿದ್ದ ಮಣ್ಣಿನ ಪಾತ್ರೆಗಳು, ಇಂದು ಆಧುನಿಕ ಯಂತ್ರಗಳನ್ನು ಬಳಸಿ ತಯಾರಿಸಲಾಗುತ್ತಿದೆ. ದಿನಕ್ಕೆ 30 ಮಡಿಕೆಗಳನ್ನು ಮಾಡುತ್ತಿದ್ದ ಕುಂಬಾರರು ಇಂದು ಪವರ್ ಮಿಷನ್​ಗಳನ್ನು ಬಳಸಿಕೊಂಡು ದಿನಕ್ಕೆ 100 ಕ್ಕೂ ಹೆಚ್ಚಿನ ಮಡಿಕೆಗಳನ್ನು ತಯಾರಿಸುವ ಹಂತಕ್ಕೆ ತಲುಪಿದ್ದಾರೆ.

ಅದರಲ್ಲೂ ಪುತ್ತೂರಿನಲ್ಲಿ ಕಾರ್ಯಾಚರಿಸುತ್ತಿರುವ ಪುತ್ತೂರು ಕುಂಬಾರರ ಸೊಸೈಟಿ ಕುಲವೃತ್ತಿಯಿಂದ ದೂರ ಸರಿದ ಯುವಕರನ್ನು ಮತ್ತೆ ಕುಲವೃತ್ತಿಯತ್ತ ಸೆಳೆಯುವ ಪ್ರಯತ್ನವೂ ನಡೆಯುತ್ತಿದೆ. ಈ ನಡುವೆ ಕುಂಬಾರಿಕೆ ವೃತ್ತಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಎಂ.ಆರ್.ಪಿ.ಎಲ್ ನಂತಹ ಸಂಸ್ಥೆಗಳು, ಆಧುನಿಕ ಯಂತ್ರಗಳು ಮತ್ತು ಉಪಕರಣಗಳನ್ನು ನೀಡುವ ಕಾರ್ಯವೂ ನಡೆಯುತ್ತಿದೆ.

ನಗರ ವಾಸಿಗಳು ಮಣ್ಣಿನ ಪಾತ್ರೆ ಇಷ್ಟಪಡುತ್ತಾರೆ: ''ಈ ಮೊದಲು ನಾವು ಹ್ಯಾಂಡ್​ ವೀಲ್ ಬಳಸುತ್ತಿದ್ದೆವು. ಈಗ ಪವರ್ ವೀಲ್ ಬಂದಿದೆ. ಇದರಲ್ಲಿ ಕೈಯಲ್ಲಿ ತಿರುಗಿಸುವ ಕೆಲಸ ಇಲ್ಲ. ವಿದ್ಯುತ್​ ಚಾಲಿತವಾಗಿದೆ. ಈಗ ನಮ್ಮ ಶ್ರಮವೂ ಉಳಿತಾಯವಾಗಿದೆ. ಪವರ್​ ವೀಲ್​ನಿಂದಾಗಿ ಇಂದು ಒಂದು ಪಾಟ್​ ಬದಲಿಗೆ ಎರಡು ಪಾಟ್​ ತಯಾರಿಸುವ ಹಂತಕ್ಕೆ ಬಂದಿದ್ದೇವೆ. ಆಗ ನಾವು ದಿನಕ್ಕೆ 50 ಪಾಟ್​ ತಯಾರಿಸುತ್ತಿದ್ದೆವು. ಈಗ 100 ಪಾಟ್​ ತಯಾರಿಸುತ್ತಿದ್ದೇವೆ. ಇವತ್ತು ಕುಂಬಾರಿಕೆಗೆ ಬೇಡಿಕೆ ಇದೆ. ಈಗ ಮಡಿಕೆ ಮಾಡುವವರೆ ಕಡಿಮೆ ಇದ್ದಾರೆ. ಮಾರಾಟ ಆಗುತ್ತದೆ. ಯಾವುದೇ ತೊಂದರೆ ಇಲ್ಲ. ಕೊರೊನಾ ಬಂದಿದ್ದರಿಂದ ಇನ್ನು ಬೇಡಿಕೆ ಜಾಸ್ತಿಯಾಗಿದೆ. ಹಳ್ಳಿಗಿಂತಲೂ ನಗರದ ಜನ ಈ ವಸ್ತುಗಳನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ. ಅದರಲ್ಲಿಯೂ ದಕ್ಷಿಣ ಕನ್ನಡದಲ್ಲಿ ಮೀನು ಮಾಂಸದ ಅಡುಗೆಗೆ ಮಣ್ಣಿನ ಪಾತ್ರೆಯೇ ಉತ್ತಮ. ಹಾಗಾಗಿ ಬೇಡಿಕೆ ಹೆಚ್ಚಿದೆ. ಇಲ್ಲಿ ಆರೋಗ್ಯ ಹಾಗೂ ರುಚಿ ಎರಡನ್ನೂ ನಾವು ಕಾಯ್ದುಕೊಳ್ಳಬಹುದು'' ಅಂತಾರೆ ಕುಂಬಾರರ ಗುಡಿ ಕೈಗಾರಿಕಾ ತಾಂತ್ರಿಕ ಮುಖ್ಯಸ್ಥ ರಮೇಶ್.

ಇದನ್ನೂ ಓದಿ:ಮನಸೆಳೆವ ಮಣ್ಣಿನ ಕುಕ್ಕರ್‌,ಫ್ರಿಡ್ಜ್‌! ದೇಸಿ ಬಳಸಿ ಆರೋಗ್ಯ ಗಳಿಸಿ!

ABOUT THE AUTHOR

...view details