ಮಂಗಳೂರು:ಜಿಲ್ಲೆಯಲ್ಲಿ ಲಾಕ್ ಡೌನ್ ಆದೇಶಕ್ಕೆ ಮಿಶ್ರ ಸ್ಪಂದನೆ ವ್ಯಕ್ತವಾಗುತ್ತಿದೆ. ಅಧಿಕಾರಿಗಳ ಮಾತಿಗೆ ಬೆಲೆ ನೀಡಿ ಬಹಳಷ್ಟು ಮಂದಿ ಉತ್ತಮವಾಗಿ ಸ್ಪಂದಿಸುತ್ತಿದ್ದರೆ ಮತ್ತೊಂದೆಡೆ ಅನಗತ್ಯ ಓಡಾಟ ಮುಂದುವರೆದಿದೆ.
ಲಾಕ್ ಡೌನ್ ಗೆ ಕರಾವಳಿ ಮಂದಿಯ ಮಿಶ್ರ ಸ್ಪಂದನೆ - ಮಂಗಳೂರು ಜಿಲ್ಲಾಡಳಿತದ ಆದೇಶ ಉಲ್ಲಂಘನೆ
ಮಂಗಳೂರು ಜಿಲ್ಲೆಯಲ್ಲಿ ಲಾಕ್ ಡೌನ್ ಆದೇಶಕ್ಕೆ ಬಹಳಷ್ಟು ಮಂದಿ ಉತ್ತಮವಾಗಿ ಸ್ಪಂದಿಸುತ್ತಿದ್ದರೆ ಮತ್ತೊಂದೆಡೆ ಅನಗತ್ಯ ಓಡಾಟ ಮುಂದುವರೆದಿದೆ. ಅಂತವರಿಗೆ ಜಿಲ್ಲಾಡಳಿತ ಕಠಿಣ ಕ್ರಮದ ಮೂಲಕ ಕಡಿವಾಣ ಹಾಕಬೇಕಾಗಿದೆ.
ಜಿಲ್ಲಾಡಳಿತದ ಆದೇಶ ಉಲ್ಲಂಘಿಸಿ ಅನಗತ್ಯವಾಗಿ ತಿರುಗುವ ವಾಹನಗಳನ್ನು ವಶಕ್ಕೆ ಪಡೆಯಲಾಗುತ್ತಿದೆ. ಜೊತೆಗೆ, ಅಂತವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಆದರೂ ಕೆಲವರು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಕೊರೊನಾ ಸೋಂಕಿನಿಂದ ಮಹಿಳೆಯೊಬ್ಬರು ಮೃತಪಟ್ಟ ಪರಿಣಾಮ ಜನರು ಬಹಳಷ್ಟು ಆತಂಕಕ್ಕೀಡಾಗಿದ್ದರು. ಇದೀಗ ಉಪ್ಪಿನಂಗಡಿಯ ಕೊರೊನಾ ಸೋಂಕಿತ ವ್ಯಕ್ತಿಯ ಪತ್ನಿಗೂ ಸೋಂಕು ದೃಢಗೊಂಡಿದೆ. ಇದರಿಂದ ಜನತೆಯಲ್ಲಿ ಮತ್ತಷ್ಟು ಆತಂಕ ಹೆಚ್ಚಿದೆ. ಆದರೂ ಕೆಲವರಲ್ಲಿ ಇನ್ನೂ ಜಾಗೃತಿ ಮೂಡಿದಂತಿಲ್ಲ. ಅಂತವರಿಗೆ ಜಿಲ್ಲಾಡಳಿತ ಕಠಿಣ ಕ್ರಮದ ಮೂಲಕ ಕಡಿವಾಣ ಹಾಕಬೇಕಾಗಿದೆ.