ಉಳ್ಳಾಲ:ಸೋಮೇಶ್ವರ ಕಡಲ ತೀರಕ್ಕೆ ಪ್ರವಾಸಕ್ಕೆಂದು ಬಂದಿದ್ದ ಮೂವರು ಯುವತಿಯರು ಸಮುದ್ರದಲ್ಲಿ ಆಟವಾಡುವ ಸಂದರ್ಭ ಬೃಹತ್ ಅಲೆ ಅಪ್ಪಳಿಸಿ ಯುವತಿಯೋರ್ವಳು ಸಮುದ್ರಪಾಲಾಗುತ್ತಿರುವುದನ್ನು ಗಮನಿಸಿದ ಕರಾವಳಿ ಕಾವಲು ಪಡೆ ಸಿಬ್ಬಂದಿ ಸಮವಸ್ತ್ರದಲ್ಲೇ ಸಮುದ್ರಕ್ಕೆ ಹಾರಿ ರಕ್ಷಿಸಿದ್ದಾರೆ.
ಬೆಂಗಳೂರಿನಿಂದ ಕ್ಯಾಬ್ ಮೂಲಕ ಬಂದಿದ್ದ ಜಯಶ್ರೀ ಮತ್ತು ಕ್ರಿಯಾ ಎಂಬ ಸ್ನೇಹಿತೆಯರ ಜತೆಗೆ ಪ್ರವಾಸಕ್ಕೆಂದು ಬಂದಿದ್ದ ಬೆಂಗಳೂರು ಬೊಮ್ಮಸಂದ್ರ ನಿವಾಸಿ ಕೀರ್ತಿ(23) ರಕ್ಷಿಸಲ್ಪಟ್ಟ ಯುವತಿ.