ಮೂಡುಬಿದಿರೆ(ದ.ಕ):ಜಿಲ್ಲೆಯ ಮೂಡಬಿದಿರೆಯ ಶಿವರಾಮ ಕಾರಂತ ಪ್ರತಿಷ್ಠಾನವು ನೀಡುವ 2020ನೇ ಸಾಲಿನ ಶಿವರಾಮ ಕಾರಂತ ಪ್ರಶಸ್ತಿಗೆ ಹಿರಿಯ ವಿಮರ್ಶಕ ಪ್ರೊ.ಸಿ.ಎನ್.ರಾಮಚಂದ್ರನ್ ಮತ್ತು ಪ್ರೊ. ಪ್ರೇಮಶೇಖರ್ ಅವರು ಆಯ್ಕೆಯಾಗಿದ್ದಾರೆ.
ಶಿವರಾಮ ಕಾರಂತ ಪ್ರಶಸ್ತಿಗೆ ಸಿ.ಎನ್.ರಾಮಚಂದ್ರನ್, ಪ್ರೊ.ಪ್ರೇಮಶೇಖರ್ ಆಯ್ಕೆ - ಶಿವರಾಮ ಕಾರಂತ ಪ್ರತಿಷ್ಠಾನ
ಶಿವರಾಮ ಕಾರಂತ ಪ್ರತಿಷ್ಠಾನವು ನೀಡುವ 2020ನೇ ಸಾಲಿನ ಶಿವರಾಮ ಕಾರಂತ ಪ್ರಶಸ್ತಿಗೆ ವಿಮರ್ಶಕ ಪ್ರೊ.ಸಿ.ಎನ್.ರಾಮಚಂದ್ರನ್ ಮತ್ತು ಪ್ರೊ. ಪ್ರೇಮಶೇಖರ್ ಆಯ್ಕೆಯಾಗಿದ್ದಾರೆ.

ಈ ಪ್ರಶಸ್ತಿಯು 20 ಸಾವಿರ ಗೌರವ ಸಂಭಾವನೆ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಸಿ.ಎನ್.ರಾಮಚಂದ್ರನ್ ಕನ್ನಡದ ಖ್ಯಾತ ವಿಮರ್ಶಕರಾಗಿದ್ದು, ಕನ್ನಡದಲ್ಲಿ 22, ಆಂಗ್ಲ ಭಾಷೆಯಲ್ಲಿ 15 ಗ್ರಂಥಗಳನ್ನು ರಚಿಸಿದ್ದಾರೆ. ಪ್ರೊ.ಪ್ರೇಮಶೇಖರ್ ಅವರು ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸಾಹಿತ್ಯ ರಚಿಸಿದ್ದು 14 ಕಥಾ ಸಂಕಲನ, 1 ಕವಿತಾ ಸಂಕಲನ, 15 ಲೇಖನ ಸಂಕಲನಗಳನ್ನು ಹಾಗೂ 2 ಸಂಶೋಧನಾ ಕೃತಿಗಳನ್ನು ರಚಿಸಿದ್ದಾರೆ. ಇವರು ಹೊರರಾಜ್ಯದ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿದ್ದು, ರಾಜ್ಯಶಾಸ್ತ್ರ ಚಿಂತಕರಾಗಿದ್ದಾರೆ ಎಂದು ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ.ಜಯಪ್ರಕಾಶ ಮಾವಿನಕುಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.